ಮೆಣಸಗಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟ

14 MENASAGI
Published on

ಮೆಣಸಗಿ: ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆಯು ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಮನಸನ್ನು ಉಲ್ಲಾಸಗೊಳಿಸುತ್ತದೆ. ಯಾವಾಗಲೂ ನೆಮ್ಮದಿ ನೀಡುತ್ತದೆ ಎಂದು ಲಿಂಗಬಸವೇಶ್ವರ ಮಠದ ಮುದಿಯಪ್ಪಯ್ಯ ಸ್ವಾಮೀಜಿಗಳು ಹೇಳಿದರು.

ಗ್ರಾಮದಲ್ಲಿ ಆಯೋಜಿಸಿದ್ದ 2023- 24ನೇ ಸಾಲಿನ ಹೊಳೆಆಲೂರು ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡಾ ಧ್ವಜಾರೋಹಣವನ್ನು ಶಂಕ್ರಪ್ಪ ಯಲಿಗಾರ ನೆರವೇರಿಸಿದರು. ನಿಂಗನಗೌಡ ಅಂದನಗೌಡ ಹಿರೇಗೌಡ್ರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂಗಪ್ಪ ಗುಳೇದಗುಡ್ಡ ಪ್ರತಿಜ್ಞಾವಿಧಿ ಬೋಧಿಸಿದರು.

ಹುಲ್ಲೂರು, ಹೊಳೆಆಲೂರ, ಅಸೂಟಿ, ಹುನಗುಂಡಿ ಮೆಣಸಗಿ, ಹೊಳೆಮಣ್ಣೂರು, ಅಮರಗೋಳ ಶಾಲೆಗಳ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಶಿಕ್ಷಕ ಶಿವಾನಂದ ಕತ್ತಿ ನಿರೂಪಿಸಿ, ಮುಖ್ಯಶಿಕ್ಷಕ ಎಸ್.ಎಸ್. ಬಾಣದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net