

ನೆಲ್ಯಾಡಿ: ಉಪ್ಪಿನಂಗಡಿ ವಲಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಕ್ರೀಡಾಕೂಟವು ಮಂಗಳವಾರ ಆರಂಭಗೊಂಡಿದ್ದು, ಅ.23ರಂದು ಸಮಾರೋಪ ನಡೆಯಲಿದೆ. ಉಪ್ಪಿನಂಗಡಿ ವಲಯದ 13 ಪ್ರಾಥಮಿಕ ಶಾಲೆಗಳು, 14ರ ವಯೋಮಾನದಲ್ಲಿ 14 ಶಾಲೆಗಳು, 17ರ ವಯೋಮಾನದಲ್ಲಿ 12 ಶಾಲೆಗಳು ನೋಂದಣಿ ಮಾಡಿಕೊಂಡಿವೆ.
ಇಂದು ಉದ್ಘಾಟನೆ: ಅ. 23ರಂದು ಬೆಳಗ್ಗೆ ಗಣ್ಯರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಬೆಥನಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ರೆ.ಫಾ. ಡಾ.ವರ್ಗಿಸ್ ಕೈಪನಡುಕ ಅಧ್ಯಕ್ಷತೆ ವಹಿಸಲಿದ್ದು, ಉಪ್ಪಿನಂಗಡಿ ಠಾಣಾಧಿಕಾರಿ ಅವಿನಾಶ್ ಎಚ್. ಗೌಡ ಉದ್ಘಾಟಿಸಲಿದ್ದಾರೆ. ಇಕ್ಬಾಲ್ ಮತ್ತು ಕೆ.ಪಿ.ಟಿಟ್ಟಿ ಕ್ರೀಡಾ ಜ್ಯೋತಿ ಬೆಳಗಲಿರುವರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಧ್ವಜಾರೋಹಣ ನಡೆಸಲಿರುವರು. ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.