

ಗದಗ: ಜಗತ್ತು ನಿತ್ಯವೂ ಹೊಸತನದತ್ತ ಸಾಗುತ್ತದೆ ಹಾಗೆ ನಮ್ಮ ಕಾಯಿಲೆಗಳು ಕೂಡಾ, ಜನರ ಹೊಸ ಲೈಪ್ ಸ್ಟೈಲ್ ನಿಂದಾಗಿ ಹೆಚ್ಚಾಗುತ್ತಿರುವ ಡಯಾಬಿಟೀಸ್, ಹೈಪರ್ ಟೆನ್ಶೆನ್ ಜೀವನದ ಡಿಸ್ ಆಡರ್ ಗಳಿಂದ ಮುಂದಾಗುವ ಸಮಸ್ಯೆಗಳನ್ನು ತಡೆಗಟ್ಟಿ ಜನರಲ್ಲಿ ಹೊಸ ಮತ್ತು ಔಷಧಿ ಮುಕ್ತ ಬದುಕು ನಿರ್ಮಿಸುವಲ್ಲಿ ಐಎಂಎ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಭಾನುವಾರ ಗದಗ ನಗರದ (ಜಿಮ್ಸ್) ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಐಎಂಎ ರಾಷ್ಟ್ರೀಯ ಘಟಕದ ವತಿಯಿಂದ ಸೌಥ್ ಜೋನ್ ಸಿಜಿಪಿ ವೈದ್ಯರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಡಯಾಬಿಟಿಸ್ ಎನ್ನುವುದು ಇಂದು ಎಲ್ಲರನ್ನು ವ್ಯಾಪಕವಾಗಿ ಕಾಡುತ್ತಿರುವ ಸಮಸ್ಯೆಯಾಗಿದ್ದು ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳಿಂದ ಸಾಧ್ಯವಿಲ್ಲ, ವೈದ್ಯರಿಂದ ಸಾಧ್ಯವಿದೆ. ಈ ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದ ಯೋಗದ ಬಗ್ಗೆ ವೈದ್ಯರು ಹೇಳಬೇಕು, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಸೂಚಿಸಬೇಕು. ಔಷಧಿ ಇಲ್ಲದೇ ಕಡಿಮೆ ಮಾಡಬೇಕಿದೆ. ಕಾಯಿಲೆಗಳು ಹರಡದಂತೆ ಅಗತ್ಯ ಕ್ರಮಗಳ ವೈದ್ಯರೇ ಹೇಳಿದಾಗ ಜನರಿಗೆ ಹೆಚ್ಚು ಮನವರಿಕೆಯಾಗುತ್ತದೆ ಅಂತಾ ಪ್ರಯತ್ನಗಳು ಅಲೋಪತಿ ವೈದ್ಯರಿಂದ ಆಗಬೇಕಿದೆ ಎಂದರು.
ಐಎಂಎ ರಾಷ್ಟ್ರೀಯ ಸಂಘದ ಅಧ್ಯಕ್ಷ ಡಾ.ಶರತ್ ಅಗ್ರವಾಲ ಮಾತನಾಡಿ ಕರ್ನಾಟಕ ಐಎಂಎ ಘಟಕಕ್ಕೆ 7 ರಾಜ್ಯಾಧ್ಯಕ್ಷರನ್ನು ಗದಗ ಜಿಲ್ಲೆ ನೀಡಿದ್ದು, ಇದು ದೇಶದಲ್ಲಿಯೇ ಮೊದಲನೇದ್ದಾಗಿದೆ. ಸಣ್ಣ ಜಿಲ್ಲೆಯಿಂದಲೇ ಇಷ್ಟೊಂದು ಸಂಖ್ಯೆಯ ವೈದ್ಯರು ರಾಜ್ಯಾಧ್ಯಕ್ಷರಾಗಿ ಕಾರ್ಯ ಮಾಡಿದ್ದನ್ನು ಗಮನಿಸಿದಾಗ ಗದಗ ಜಿಲ್ಲೆ ನಾಯಕರನ್ನು ನಿರ್ಮಿಸುವ ಜಿಲ್ಲೆಯಾಗಿದೆ ಎಂದರೆ ತಪ್ಪಾಗಲಾರದು ಎಂದ ಅವರು, ದೇಶದಲ್ಲಿ ಪ್ಯಾಮಿಲಿ ಫಿಶಿಯನ್ ಅತ್ಯಂತ ಅವಶ್ಯಕತವಾಗಿದ್ದು ಅದನ್ನು ಬೆಳೆಸುವ ನಿಟ್ಟಿನಲ್ಲಿ ಐಎಂಎ ಮಹತ್ವದ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಹುಟ್ಟಿದ ಸಂಸ್ಥೆಯಾಗಿದೆ. ಕೋವಿಡ್ ನಲ್ಲಿ 2 ಸಾವಿರಕ್ಕೂ ವೈದ್ಯರನ್ನು ಕಳೆದುಕೊಂಡಿದ್ದೇವೆ, ಆವ್ ಗಾಂವ್ ಚಲೇ.. ಈ ಕಾರ್ಯಕ್ರಮದ ಮೂಲಕ ವೈದ್ಯರ ಜನರ ಬಳಿಗೆ ತೆರಳಿ ಅವರು ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಐಎಂಎ ಮಾಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಡಾ ಪ್ಯಾರಾರಲಿ ನೂರಾನಿ ಮಾತನಾಡಿ ಸಿಜಿಪಿ ಕಾನ್ಫೆರೆನ್ಸ್ ಪ್ರಾಥಮಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಪ್ರಾಥಮಿಕ ಆರೋಗ್ಯದಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಈ ಬಗ್ಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸರ್ಕಾರಗಳಿಂದಲೂ ಬೇಕು ಎಂದ ಅವರು, ಪೊಲಿಯೋ ಹೊಡಿದೊಡಿಸುವಲ್ಲಿ ಪ್ರಾಮರಿ ಕೇರ್ ಪಾತ್ರ ಪ್ರಮುಖವಾಗಿದೆ ಎಂದರು.
ಐಎಂಎ ರಾಷ್ಟ್ರೀಯ ಡೀನ್ ಡಾ ರಾಯಪರ ರಮೇಶ ಬಾಬು ಮಾತನಾಡಿ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪ್ರೈಮರಿ ಕೇರ್ ಫಿಜಿಶನ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವೈದ್ಯರ ಮೇಲೆ ಹಲ್ಲೆಗಳು ಆಗುವುದು ಕೇವಲ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯರು ಮತ್ತು ರೋಗಿಗಳ ನಡುವೆ ಉತ್ತಮ ಸಂಬಂಧ ಬೆಳೆದಾಗ ಯಾವುದೇ ಸಮಸ್ಯೆಗಳು ಸೃಷ್ಟಿಯಾಗುವುದಿಲ್ಲ ಎಂದು ಹೇಳಿ, ವೈದ್ಯರು ಅನುಸರಿಸಬೇಕಾದ 7 ಪ್ರಮುಖ ಅಂಶಗಳನ್ನು ತಿಳಿಸಿದರು. ಆರೋಗ್ಯ ಸಚಿವ ದಿನೇಶ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮುಂತಾದವರು ಮಾತನಾಡಿದರು. ಐಎಂಎ ರಾಜ್ಯಾಧ್ಯಕ್ಷ ಡಾ.ಶಿವಕುಮಾರ ಲಕ್ಕೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಸುಜಿತ್ ವಾಲಿ, ಡಾ ವೆಂಕಟಾಚಲಪತಿ, ಡಾ ರಮೇಶ ಬಾಬು, ಡಾ ಅಂಬುರಾಜನ್, ಡಾ ಪವನಪಾಟೀಲ, ಡಾ.ಪಿ.ವಿ.ಕುರುಣಾಕರನ್, ಡಾ ವಿಜಯ ಸಾರಥಿ, ಡಾ ಅಣ್ಷಯ್ಯ, ಡಾ ಸವಿತಾ, ಡಾ.ಪ್ಯಾರಾಅಲಿ ನೂರಾನಿ, ಡಾ.ಶ್ರೀಧರ ಕುರುಡಗಿ, ಡಾ.ಬಸವರಾಜ ಬೊಮ್ಮನಹಳ್ಳಿ , ಡಾ ಜಯರಾಜ, ಡಾ.ಆಲೂರ ಸೇರಿದಂತೆ ದಕ್ಷಿಣ ರಾಜ್ಯಗಳ ಸಾವಿರಾರು ವೈದ್ಯರು, ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೋಟ್: ಮಧುಮೇಹ ಮತ್ತು ಬಿಪಿ ಜತೆಗೆ ಇತ್ತೀಚಿಗೆ ಅಪೌಷ್ಠಿಕತೆ ಮತ್ತು ಓಬ್ಯಾಸಿಟಿ ಎನ್ನುವ ಹೊಸ ಸವಾಲುಗಳನ್ನು ಸೃಷ್ಟಿಯಾಗುತ್ತಿವೆ. ಇವುಗಳಿಂದಲೂ ಜನರು ಸಾಕಷ್ಟು ಪರಿತಪಿಸುತ್ತಿದ್ದು ಹೊಸ ಕಾಯಿಲೆಗಳು ಎಂದು ಕರೆಯುವ ಈ ಸಮಸ್ಯೆಗಳಿಗೆ ಪರಿಹಾರವೆಂದರೆ ಅದು ಕುಟುಂಬ ವೈದ್ಯರು, ವೈದ್ಯರು ರೋಗಿಗಳೊಂದಿಗೆ ವೈಯಕ್ತಿಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕು, ವೈದ್ಯರ ಮಾತು ಆ ಕುಟುಂಬಕ್ಕೆ ನಿಜ ಎನಿಸಿದಾಗ ಅವರು ಸಹಜವಾಗಿಯೇ ಬದಲಾಗುತ್ತಾರೆ. ಅವರ ಆರೋಗ್ಯದಲ್ಲಿಯೂ ಬದಲಾವಣೆಯಾಗುತ್ತದೆ. ವೈದ್ಯರು ದೇವರು ಎಂದು ಎಲ್ಲರೂ ಭಾವಿಸುತ್ತಾರೆ. ಅದು ಹಾಗೆಯೇ ಮುಂದುವರಿಯಬೇಕಾದಲ್ಲಿ ರೋಗಿಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ
ಎಚ್.ಕೆ.ಪಾಟೀಲ. ಕಾನೂನು ಸಚಿವ
--------------
ಕೋಟ್: ವೈದ್ಯರ ಮೇಲೆ ಆಗುತ್ತಿರುವ ಹಲ್ಲೆ ತಪ್ಪಿಸಲು ವಿಶೇಷ ಕಾನೂನು ರಚಿಸಬೇಕು ಎಂದು ಹಲವಾರು ಬಾರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಆದರೆ ಹಲವಾರು ರಾಜ್ಯಗಳಲ್ಲಿ ಈಗಾಗಲೇ ವೈದ್ಯರ ರಕ್ಷಣೆಗೆ ಕಾನೂನು ಜಾರಿಯಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಜಾರಿ ಮಾಡಬೇಕು ಮತ್ತು ಕೇಂದ್ರ ಸರ್ಕಾರ ಜನರೆಜಿಕ್ ಔಷಧಿ ನೀಡುವುದನ್ನು ಕಡ್ಡಾಯಗೊಳಿಸಿದೆ ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ. ಜನರೆಕ್ ಮೆಡಿಶನ್ ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಔಷಧಿ ಇರುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ.
-ಡಾ.ಅನಿಲಕುಮಾರ. ಐಎಂಎ. ಗುಜರಾತ ಪ್ರತಿನಿಧಿ.