ಅನುಚಿತ ವತಿರ್ಸಿದ ಜಿಮ್ಸ್​ ವೈದ್ಯ.

bab08d76-88e1-4db6-9a29-a38c6aca9a98
Published on

ಗದಗ: ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ಜಿಮ್ಸ್​ ವೈದ್ಯನೋರ್ವ ಕೆಲಸವೇಳೆಯಲ್ಲೇ ರೋಗಿಗಳೊಂದಿಗೆ ಅನುಚಿತ ವತಿರ್ಸಿ ಬೆದರಿಕೆಯೊಡ್ಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವೈದ್ಯನ ಹುಚ್ಚಾಟಕ್ಕೆ ರೋಗಿಗಳು ಕಂಗಾಲಾಗಿದ್ದು, ಆಡಳಿತಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಮಾನಸಿಕ ಅಸ್ವಸ್ಥನಂತೆ ವತಿರ್ಸಿರುವ ವೈದ್ಯನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಮ್ಸ್​ ಆಡಳಿತಾಧಿಕಾರಿಗಳು ವೈದ್ಯನ್ನು ಖಾಯಂ ರಜೆ ಮೇಲೆ ಮನೆಗೆ ಕಳುಹಿಸಿದ್ದಾರೆ. ಗದಗ ಜಿಲ್ಲಾಸ್ಪತ್ರೆ(ಜಿಮ್ಸ್​)ಯಲ್ಲಿ ಈ ಪ್ರಕರಣ ನಡೆದಿದ್ದು, ಗೌತಮ್​ ಪಾಟೀಲ ಎಂಬ ವೈದ್ಯ ರೋಗಿಗಳ ಮುಂದೆ ಶರ್ಟ್​ ಬಿಚ್ಚಿ, ಅನುಚಿತ ವರ್ತನೆ ಮಾಡಿದ್ದ.

ಏನಿದು ಪ್ರಕರಣ?
ಸೂರಣಗಿ ಗ್ರಾಮದ ಹುಸೇನಬಿ ಹೊಳಲ ಎಂಬವರಿಗೆ ಇತ್ತೀಚೆಗೆ ಹೆರಿಗೆ ಆಗಿತ್ತು. ಕಾಮಾಲೆ, ಅಸ್ತಮಾ ರೋಗದಿಂದ ಹಸುಗೂಸು ಬಳಲುತ್ತಿತ್ತು. ಈ ವೇಳೆ ಸರಿಯಾಗಿ ಚಿಕಿತ್ಸೆ ನೀಡಬೇಕೆಂದು ಪತಿ ಮುಸ್ತಾಕಅಲಿ ಎಂಬುವರು ವೈದ್ಯರಿಗೆ ಮನವಿ ಮಾಡಿದ್ದರು. ವೈದ್ಯರು ಸಮರ್ಪಕವಾಗಿ ಸ್ಪಂಧಿಸಿಲ್ಲ ಎಂದು ಆರೋಪಿಸಿ ಸ್ಥಳಿಯ ರಾಜಕೀಯ ಮುಖಂಡ ಓರ್ವನಿಗೆ ಮುಸ್ತಾಕಅಲಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದಾಗಿ ವೈದ್ಯರು ಹಾಗೂ ಸಿಬ್ಬಂದಿಗಳು ಮುಸ್ತಾಕಅಲಿ ಮೇಲೆ ಮತ್ತಷ್ಟು ಕೋಗೊಂಡಿದ್ದಾರೆ. ಈ ವೇಳೆ ವೈದ್ಯ ಗೌತಮ್​ ಮುಸ್ತಾಕಅಲಿ ಮೇಲೆ ಹಲ್ಲೆ ಮಾಡಿದರು. ಅನುಚಿತ ವರ್ತನೆ ಮಾಡಿದರು ಎಂದು ರೋಗಿಗಳು ಆರೋಪಿಸಿದ್ದಾರೆ. ವೈದ್ಯನ ಅನುಚಿತ ವರ್ತನೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ?
ರೋಗಿ ಸಂಬಂಧಿಕರಿಗೆ ಬೆದರಿಕೆ ಹಾಕಿರುವ ವೈದ್ಯ ಗೌತಮ್​ "ಏನ್​ ಮಾಡ್ಕೋ ಮಾಡ್ಕೊ? ಪ್ರೇಸ್​ಮಿಟ್​ ಮಾಡ್ತಿಯಾ? ಫೇಸ್​ಬುಕ್​ ಲೈವ್​ ಬಿಡ್ತಿಯಾ ಬಿಟ್ಕೋ? ಗದಗ ಜಿಲ್ಲೆ ರೋಣ ತಾಲೂಕಿನ ಕುರಹಟ್ಟಿ ಊರು ನಂದು. ಬಾ ಅಲ್ಲಿ ನೋಡ್ಕೋತಿನಿ' ಎಂದು ಬೆದರಿಕೆಯೊಡ್ಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net