ನವೋದಯ ಪರೀಕ್ಷೆಗೆ ಉಚಿತ ತರಬೇತಿ: ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾಹಿತಿ

Zilla Raitha Sangh Press Conference Mandya
Published on

ಮಂಡ್ಯ: ರಾಜ್ಯದಲ್ಲಿ ಶಿಕ್ಷಣ ಮಟ್ಟ ವೃದ್ಧಿಗಾಗಿ ಮಕ್ಕಳು ನವೋದಯ ಪರೀಕ್ಷೆ ಬರೆಯುವಂತಾಗಲು ಆನ್‌ಲೈನ್ ತರಗತಿ ಹಾಗೂ ಯೂಟ್ಯೂಬ್‌ನಲ್ಲಿ ತರಗತಿ ವಿಡಿಯೋ ಮೂಲಕ ಉಚಿತ ತರಬೇತಿಯನ್ನು ಪ್ರೊ.ಸಂತೋಷ್ ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮನವಿ ಮಾಡಿದರು.

ರಾಜ್ಯದ ಶಿಕ್ಷಣ ಮಟ್ಟ ಕುಸಿದಿದ್ದು, ಮಕ್ಕಳಿಗೆ ಮೌಲ್ಯವುಳ್ಳ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಘದ ಯುವ ಘಟಕ ಅಧ್ಯಕ್ಷ ಪ್ರೊ.ಸಂತೋಷ್ ಉಚಿತ ತರಬೇತಿ ನೀಡುತ್ತಿದ್ದಾರೆ. ಶಿಕ್ಷಣ ಮಟ್ಟ ಸುಧಾರಿಸದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಐದನೇ ತರಗತಿ ಓದುವ ಮಕ್ಕಳು ತಪ್ಪದೇ ನವೋದಯ ಪರೀಕ್ಷೆ ಬರೆಯುವಂತೆ ಮಾಡಲು ಪಾಲಕರು ಗಮನ ಹರಿಸಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘದ ಯುವ ಘಟಕ ಅಧ್ಯಕ್ಷ ಪ್ರೊ.ಸಂತೋಷ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ. ಕಲಿಕೆ ಸಂಬಂಧ ಪ್ರೀ ಸ್ಕೂಲ್‌ನಿಂದ ಎಸ್‌ಎಸ್‌ಎಲ್‌ಸಿ ಹಾಗೂ ಸಿಬಿಎಸ್ಸಿ ಪಠ್ಯಕ್ರಮಗಳನ್ನು ಸಿದ್ದಪಡಿಸಿ ಆನ್‌ಲೈನ್‌ನಲ್ಲಿ ಪಾಠ ಮಾಡುತ್ತೇನೆ. ಅಂತೆಯೇ ನವೋದಯ ಪರೀಕ್ಷೆ ಸಂಬಂಧ ಪಠ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ಪಾಠದ ವೀಡಿಯೋಗಳನ್ನು ಹಾಕಲಾಗಿದೆ. ಅಲ್ಲದೇ ಸಂಬಂಧಪಟ್ಟ ಪಠ್ಯಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ. ವಿಡಿಯೋಗಳಿಗಾಗಿ http://youtube.com/@themandyagowda ಭೇಟಿ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ರೈತ ಸಂಘದ ತಾಲೂಕು ಕಾರ್ಯದರ್ಶಿ ಸುರೇಶ್, ಮುಖಂಡ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net