ಜಿಲ್ಲಾ ಪಂಚಾಯತ್​ ರಾಜ್​ ಉಪವಿಭಾಗ ಕಚೇರಿ ಖಾಲಿ ಖಾಲಿ

FotoJet
Published on

ಮುಳಬಾಗಿಲು: ನಾಗರಿಕರಿಗೆ ಸಕಾಲಕ್ಕೆ ಸೇವೆ ಒದಗಿಸುತ್ತೇವೆ ಎಂದು ಭಾಷಣ ಮಾಡುವ ಜನಪ್ರತಿನಿಧಿಗಳು ಮತ್ತು ಸರ್ಕಾರ ಜನರ ಕೆಲಸ ಮಾಡುವ ಇಲಾಖೆಗಳಲ್ಲಿ ಹುದ್ದೆಗಳನ್ನು ಖಾಲಿ ಇಟ್ಟು, ಪೊಳ್ಳು ಭರವಸೆ ನೀಡುತ್ತಲ್ಲೇ ಬರುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಮುಳಬಾಗಿಲಿನ ಜಿಲ್ಲಾ ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ಉಪ ವಿಭಾಗದಲ್ಲಿ 2023ರ ನ.29ರಿಂದ ಎಇಇ ಸೇರಿ ಅಧಿಕಾರಿಗಳು, ನೌಕರರ ವರ್ಗ ಕಚೇರಿಗೆ ಆಗಮಿಸದೇ ಎಲ್ಲವೂ ಖಾಲಿ ಖಾಲಿಯಾಗಿದ್ದು, ಇಲಾಖೆ ಬಗ್ಗೆ ಏಕಿಷ್ಟು ರ್ನಿಲಕ್ಷ$್ಯ ಎಂಬ ಯಕ್ಷಪ್ರಶ್ನೆ ಗುತ್ತಿಗೆದಾರರು ಮತ್ತು ಜನರಲ್ಲಿ ಕಾಡತೊಡಗಿದೆ.

ವರ್ಗಾವಣೆಗೆ ದರ ಪಟ್ಟಿಯಂತೆ ಇಲ್ಲಿಗೆ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅಷ್ಟೊಂದು ಹಣ ನೀಡಲು ಹಿಂಜರಿಯುತ್ತಿರುವುದೇ ಇಲ್ಲಿನ ಸ್ಥಾನಗಳು ಖಾಲಿ ಉಳಿಯಲು ಪ್ರಮುಖ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ತಾಲೂಕಿನ 30 ಗ್ರಾಪಂ ವ್ಯಾಪ್ತಿಯ 385 ಗ್ರಾಮಗಳಲ್ಲಿ ನಡೆಯುವ ನರೇಗಾ ಕಾಮಗಾರಿ ಸೂಪರ್​ ವೆಜಿಂಗ್​, ಅಳತೆ ಹಾಗೂ ಬಿಲ್​ ಮಾಡಲು ಜಿಲ್ಲಾ ಪಂಚಾಯತ್​ ತಾಂತ್ರಿಕ ಉಪ ವಿಭಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುವುದರ ಜತೆಗೆ ಇಲಾಖೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಬೇಕಾಗಿದ್ದು, ಎಲ್ಲವೂ ಅರ್ಧಂರ್ಬಧ ಕೆಲಸವಾಗಿದ್ದು, ಇನ್ನು ಕೆಲವು ಸ್ಥಗಿತ ಗೊಂಡಿರುವುದು ಅಭಿವೃದ್ಧಿಗೆ ಹಿನ್ನೆಡೆ ಭಾಗ್ಯ ಉಂಟಾಗಿದೆ.

ಇನ್ನಾದರೂ ಜಿಲ್ಲಾಡಳಿತ, ಸರ್ಕಾರ ಎಚ್ಚೆತ್ತುಕೊಂಡು ಖಾಲಿ ಇರುವ 11ಹುದ್ದೆಗಳನ್ನು ಭರ್ತಿ ಮಾಡಿ, ಜನರಿಗೆ ಸೇವೆ ನೀಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಎಲ್ಲವೂ ಖಾಲಿ ಖಾಲಿ

ಇರುವ 12 ಹುದ್ದೆಗೆ 11 ಹುದ್ದೆಗಳೂ ಖಾಲಿ ಇದ್ದು, ಕಚೇರಿಯು ಭಣಗುಟ್ಟುತ್ತಿದೆ. ಎಇಇ- 1, ಎಇ- 1, ಜೆಇ- 3, ಎಫ್​ಡಿಎ -1, ಚಾಲಕ -1, ಗ್ರೂಫ್​ -ಡಿ -2, ಬೆರಳು ಅಚ್ಚು -2 ಸೇರಿ 11 ಹುದ್ದೆಗಳಿಗೆ ವಾರಸುದಾರರಲಿಲ್ಲದೇ 1 ವರ್ಷ ಕಳೆದರೂ ಈ ಬಗ್ಗೆ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ, ಆರ್​ಡಿಪಿ ಆರ್​ ಇಲಾಖೆ ಸೇರಿ ಸರ್ಕಾರವೂ ಈ ಬಗ್ಗೆ ಗಮನ ಹರಿಸದಿರುವುದು ದುರಂತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net