

ರಬಕವಿ-ಬನಹಟ್ಟಿ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗುತ್ತಿರುವ ಅಪಘಾತ ಪ್ರಕರಣಗಳ ಹಿನ್ನಲೆಯಲ್ಲಿ ಎಚ್ಛೆತ್ತಿರುವ ಬನಹಟ್ಟಿ ಪೊಲೀಸ್ ಠಾಣೆ ಪೊಲೀಸರು, ಎಸ್‌ಪಿ ಅವರ ಆದೇಶದಂತೆ ಹಾಗೂ ಸಿಪಿಐ ಸಂಜಯ ಬಳಿಗಾರ ಅವರ ನೇತತ್ವದಲ್ಲಿ ಅಪಘಾತಗಳನ್ನು ಸಾಧ್ಯವಾದಷ್ಟು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಚಿಮ್ಮಡ ಗ್ರಾಮದ ಹತ್ತಿರ ಹಾಗು ಬನಹಟ್ಟಿ ಬಸವೇಶ್ವರ(ಬಿದರಿ) ಸಮುದಾಯ ಭವನ ಹತ್ತಿರ ಸೇರಿದಂತೆ ವಾಹನಗಳ ವೇಗ ನಿಯಂತ್ರಿಸಲು ಜಿಗ್-ಜಾಗ್ ಮಾದರಿಯಲ್ಲಿ ಹಲವೆಡೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಈ ಬ್ಯಾರಿಕೇಡ್‌ಗಳಿಗೆ ರಿಪ್ಲೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿಯ ವೇಳೆಯೂ ಸುರಕ್ಷಿತ ಹಾಗು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ವಾಹನ ತಪಾಸಣೆ, ವೇಗ ನಿಯಂತ್ರಣಕ್ಕೆ ಸೂಚನೆ, ರಸ್ತೆ ಬದಿಯಲ್ಲಿನ ವ್ಯಾಪಾರ ತೆರವು ಮಾಡುವ ನಿಟ್ಟಿನಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
ರಸ್ತೆ ಸುರಕ್ಷಾ ನಿಯಿಂದ ಮೋಟಾರ ವಾಹನಗಳ ಅಪಘಾತ ವಲಯಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸುವ ಮೂಲಕ ಅಪಘಾತ ಮರುಕಳಿಸದಂತೆ ಗಮನಹರಿಸುವಲ್ಲಿ ಸಹಕಾರಿಯಾಗಲಿದೆ.
ಅಲ್ಲದೆ ಕಳ್ಳ ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನಗರ ಪ್ರವೇಶದೊಳಗೆ ಆಗಮಿಸುವ ಸಂದರ್ಭ ವಾಹನಗಳು ಅದೇ ವೇಗದಲ್ಲಿ ಪ್ರವೇಶವಾಗುತ್ತಿರುವದರಿಂದ ಅಪಘಾತಕ್ಕೂ ಕಾರಣವಾಗಲಿದ್ದು, ಇವೆಲ್ಲವುಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸಕಲ ರೀತಿಯಲ್ಲಿ ಅಪರಾಧಗಳನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕಾರ್ಯಗಳನ್ನು ಜರುಗಿಸಲಾಗಿದೆ ಎಂದು ಪಿಎಸ್‌ಐ ಶಾಂತಾ ಹಳ್ಳಿ ತಿಳಿಸಿದರು.
ಎಸ್‌ಪಿ ಅವರು ಆದೇಶದಂತೆ ‘ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ನಗರ ಪ್ರದೇಶದ ಹೊರವಲಯದಲ್ಲಿ ಜಿಗ್-ಜಾಗ್ ಮಾದರಿ ಬ್ಯಾರಿಕೇಡ್‌ಗಳಿಂದ ರಸ್ತೆ ಸಂಚಾರ ಸುಗಮವಾಗುವಲ್ಲಿ ಎಚ್ಚರಿಕೆ ನೀಡುತ್ತಿವೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಸಂತಸ ಮೂಡಿಸಿದೆ.’-ಸಂಜು ಬಳಿಗಾರ, ಸಿಪಿಐ, ಬನಹಟ್ಟಿ ಪೊಲೀಸ್ ಠಾಣೆ.
ಚೆಕ್‌ಪೋಸ್ಟ್ ತೆರೆದಿರುವದು ಇದೇ ಮೊದಲು. ಸಿಸಿ ಕ್ಯಾಮೆರಾದೊಂದಿಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಸಹಕಾರಿಯಾಗಿದ್ದು, ಪೊಲೀಸ್ ಕಾರ್ಯ ಮೆಚ್ಚುವಂಥದ್ದು.
-ಸತೀಶ ಹಜಾರೆ, ಜವಳಿ ಉದ್ಯಮಿ, ರಬಕವಿ ಬನಹಟ್ಟಿ.
ಹಿರಿಯ ಪೊಲೀಸ್ ಅಕಾರಿಗಳ ಆದೇಶದಂತೆ ರಸ್ತೆ ಅಪಘಾತಗಳ ಬಗ್ಗೆ ಹೆಚ್ಚು ಜಾಗತಿ ವಹಿಸಿ ಸಂಪೂರ್ಣ ಅಪಘಾತ ನಿಯಂತ್ರಣಕ್ಕಾಗಿ ಶ್ರಮಿಸುವಲ್ಲಿ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಸಾರ್ವಜನಿಕರ ಸಹಕಾರದಿಂದ ಮತ್ತಷ್ಟು ಸಹಕಾರಿಯಾಗಲಿದೆ.
-ಶಾಂತಾ ಹಳ್ಳಿ, ಪಿಎಸ್‌ಐ, ಬನಹಟ್ಟಿ.