ಜೇವರ ಗ್ಯಾಲರಿ ಡೈಮಂಡ್ಸ್ ಚಾಂಪಿಯನ್

Zaver gallary
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಇಲ್ಲಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಆಯೋಜಿಸಿದ್ದ ಹುಬ್ಬಳ್ಳಿ ಪ್ರಿಮಿಯಮ್ ಲೀಗ್ (ಎಚ್​ಪಿಎಲ್) ಜೂನಿಯರ್-25 ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಜೇವರ ಗ್ಯಾಲರಿ ಡೈಮಂಡ್ಸ್ ತಂಡ ಚಾಂಪಿಯ್ ಆಗಿದೆ.

ಶುಕ್ರವಾರ ಫೈನಲ್ಸ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 6 ವಿಕೆಟ್​ಗಳ ಅಂತರದಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲ ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 30 ಓವರ್​ಗಳಲ್ಲಿ 5 ವಿಕೆಟ್​ಗೆ 138 ರನ್​ಗಳಿಸಿತ್ತು. ಜೇವರ ಗ್ಯಾಲರಿ ಡೈಮಂಡ್ಸ್ ಕೊನೆಯ ಓವರ್​ನಲ್ಲಿ 4ವಿಕೆಟ್​ಗೆ 142ರನ್ ಗಳಿಸಿ ಗೆಲುವು ಸಾಧಿಸಿತು.

ಜೇವರ ಗ್ಯಾಲರಿ ಡೈಮಂಡ್ಸ್ ತಂಡದ ಜೋಯ್ ಸುಳ್ಳದ (16 ವಯೋಮಿತಿ) ಹಾಗೂ ಧಾರವಾಡದ ಜೈ ಭೀಮ್ ಚಾಲೆಂಜರ್ಸ್​ನ ಅಕ್ಷಯ ಬಳಿಗಾರ (14 ವಯೋಮಿತಿ) ಉತ್ತಮ ಬ್ಯಾಟರ್, ಹುಬ್ಬಳ್ಳಿ ಟೈಗರ್ಸ್​ನ ವಿಶ್ವೇಶ ಅಳಗುಂಡಗಿ (16 ವಯೋಮಿತಿ) ಹಾಗೂ ವಿಹಾನ ಭೂಸದ (14 ವಯೋಮಿತಿ) ಉತ್ತಮ ಬೌಲರ್ ಪ್ರಶಸ್ತಿ ಪಡೆದರು.

ಹುಬ್ಬಳ್ಳಿ ಟೈಗರ್ಸ್​ನ ರೂಹಾನ ಶೇಖ್ ಪಂದ್ಯ ಶ್ರೇಷ್ಠ ಹಾಗೂ ಜೇವರ ಗ್ಯಾಲರಿ ಡೈಮಂಡ್ಸ್​ನ ಮೊಹಮ್ಮದ ಹಮ್ಜಾ ಶರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಕೋಚ್ ಎಂ.ಜಿ. ಅರುಮುಗಂ, ಕೆಎಸ್​ಸಿಎ ಧಾರವಾಡ ವಲಯ ಸಂಚಾಲಕ ನಿಖಿಲ ಭೂಸದ ಬಹುಮಾನ ವಿತರಿಸಿದರು. ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಟ್ರಸ್ಟಿ ಬಾಬಾ ಭೂಸದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಮಿತ ಭೂಸದ ಸ್ವಾಗತಿಸಿದರು.

ಸಂಕ್ಷಿಪ್ತ ಸ್ಕೋರ್

ಹುಬ್ಬಳ್ಳಿ ಟೈಗರ್ಸ್​30 ಓವರ್​ಗಳಲ್ಲಿ 5ವಿಕೆಟ್​ಗೆ 138ರನ್ (ಅಪೂರ್ವ ಎಸ್. 38, ರೂಹಾನ ಎಸ್. 48, ವಿಶ್ವೇಶ 12, ಅಭಿಷೇಕ ಎಸ್. 18ಕ್ಕೆ 2). ಜೇವರ ಗ್ಯಾಲರಿ ಡೈಮಂಡ್ಸ್ ಬೆಳಗಾವಿ-29.2 ಓವರ್​ಗಳಲ್ಲಿ 4 ವಿಕೆಟ್​ಗೆ 142 ರನ್ (ಜೋಯ್ ಎಸ್. 52, ಸ್ಕಂದ ಎಸ್. 51, ಅಭಿಷೇಕ ಎಸ್. 12, ಸ್ವಯಂ ಕೆ. 20ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net