ರಾಜ್ಯದಲ್ಲಿ ಕೈಗಾರಿಕೆ ಹೂಡಿಕೆ ಶೂನ್ಯ

25 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನೆರೆ ರಾಜ್ಯಗಳು ದಿನನಿತ್ಯ ಹೂಡಿಕೆ, ಉದ್ಯೋಗಗಳ ಮೂಲಕ ಸುದ್ದಿಯಾಗುತ್ತಿವೆ. ಆದರೆ ನಮ್ಮ ರಾಜ್ಯ ಮಾತ್ರ ಕೊಲೆ, ಸುಲಿಗೆ, ಭ್ರಷ್ಟಾಚಾರಗಳ ಮೂಲಕ ಸುದ್ದಿಯಾಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಅವರು ದಾಮೋಸ್​ನಲ್ಲಿ 6.26 ಲಕ್ಷ ಕೋಟಿ ರೂ ಹೂಡಿಕೆ ಮತ್ತು 3 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಬೃಹತ್​ ಉಕ್ಕಿನ ಯೋಜನೆಗೆ ಆರ್ಸೆಲರ್​ ಮಿತ್ತಲ್​/ನಿಪ್ಪಾನ್​ ಸ್ಟೀಲ್​ನಿಂದ 1.4 ಲಕ್ಷ ಕೋಟಿ ರೂ. ಘೋಷಿಸಲಾಗಿದೆ. ಭವಿಷ್ಯದ ಬೆಳವಣಿಗೆಗೆ ಕಾರ್ಯತಂತ್ರದ ಸಭೆಗಳನ್ನು ನಡೆಸುತ್ತದೆ. ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮೌನಕ್ಕೆ ತುತ್ತಾಗಿದ್ದಾರೆ. ಹೊರ ರಾಜ್ಯಗಳ ಜತೆಗೆ ಸ್ಪರ್ಧಿಸುವುದರ ಬದಲು ಮೌನದಲ್ಲೇ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ಕಾಂಗ್ರೆಸ್​ ಸರ್ಕಾರ ನೀಡಿದ ಭರವಸೆಗಳ ದರ್ಶನವೇ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net