ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ

Zalaki 21-1
Published on

ಝಳಕಿ: ಸಮೀಪದ ಲೋಣಿ ಬಿಕೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಷ್ಟ್ರೀಯ ಪೋಷಣ್ ಅಭಿಯಾನ ಆಚರಿಸಲಾಯಿತು.
ಅಂಗನವಾಡಿ ಮೇಲ್ವಿಚಾರಕಿ ಟಿ.ಎಸ್. ತಿಳಗುಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯರಿಗೆ, ತಾಯಂದಿರಿಗೆ ಹಾಗೂ ಮಕ್ಕಳಿರುವ ಮನೆ ಬಾಗಿಲಿಗೆ ಪೌಷ್ಟಿಕ ಆಹಾರ ಬರುವಂತೆ ಸರ್ಕಾರ ಕ್ರಮಕೈಗೊಂಡಿದ್ದು, ಅದರ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಗರ್ಭಿಣಿಯರು ತಪ್ಪದೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ನಿಯಮಿತವಾಗಿ ತೂಕ ಹಾಗೂ ರಕ್ತದೊತ್ತಡ ಪರೀಕ್ಷಿಸಿಕೊಂಡು ವೈದ್ಯರ ಸಲಹೆಯಂತೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಎಸ್.ಎಚ್. ಕುಲಕರ್ಣಿ, ಎಚ್.ಎಂ. ಧಖನಿ, ಡಾ. ಆರತಿ ಕವಳೆ, ಪಿಡಿಒ ಸಂಜುಕುಮಾರ ವಠಾರ, ರುದ್ರೇಶ ಖೈನೂರ, ಸದಾಶಿವ ತೇಲಿ, ಸುಭಾಸ ರಾಠೋಡ, ಆರ್.ಎಸ್. ಗೊಟ್ಯಾಳ, ಗೋಪಿ ರೆಡ್ಡಿ, ಎಂ.ಎ.ಬಾಗವಾನ್, ಎಸ್.ಎಚ್. ಹಡಪದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net