ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ

Zalaki-23-01
Published on

ಝಳಕಿ: ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ, ಅದು ಭಾಗ್ಯವಂತರ ಮದುವೆ ಎಂದು ಅರಣ್ಯ ಇಲಾಖೆ ಅಧಿಕಾರಿ ಧನರಾಜ ಮುಜಗೊಂಡ ಹೇಳಿದರು.

ಸುಕ್ಷೇತ್ರ ಜೇವೂರ ಗ್ರಾಮದ ಹಠಯೋಗಿ ರೇವಣಸಿದ್ಧೇಶ್ವರ ಶ್ರೀಗಳ 36ನೇ ಪುಣ್ಯಾರಾಧನೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರೊನಾ ಕಾಲದಲ್ಲಿ ಜಿಲ್ಲೆಯ ಎಲ್ಲ ಜಾತ್ರೆಗಳು ನಿಂತರೂ ಜೇವೂರದ ರೇವಣಸಿದ್ಧೇಶ್ವರರ ಆಶೀರ್ವಾದದಿಂದ ಜಾತ್ರೆ ನಿಲ್ಲಲಿಲ್ಲ. ಈ ಭಾಗದ ಜೇವೂರ ಆಧ್ಯಾತ್ಮಿಕ, ಧಾರ್ಮಿಕ, ಸಮಾಜಮುಖಿ ಕಾರ್ಯಗಳಿಂದ ಪ್ರಸಿದ್ಧವಾಗಿದೆ. ಸರಳ ಸಾಮೂಹಿಕ ವಿವಾಹದಲ್ಲಿ ಹಸಿಮಣೆ ಏರಿದ ಜೋಡಿಗಳಿಗೆ ಸಮಾಜದಲ್ಲಿ ಮಾದರಿ ವೈವಾಹಿಕ ಜೀವನ ನಡೆಸುವಂತೆ ಸಲಹೆ ನೀಡಿದರು.

ಮಂದ್ರೂಪ ಹಿರೇಮಠದ ರೇಣುಕಾ ಶಿವಾಚಾರ್ಯರು ಮಾತನಾಡಿ, ಸಾಲ ಮಾಡಿ ವೈಯಕ್ತಿಕವಾಗಿ ಮದುವೆ ಮಾಡಿಕೊಂಡು ಸಾಲ ತೀರಿಸಲು ಗೋಳಾಡುವುದಕ್ಕಿಂತ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡರೆ ಸುಖಕರ ಜೀವನ ಸಾಗಿಸಬಹುದು ಎಂದರು.

ಹಿರೂರ ಜಯಸಿದ್ಧೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ನವ ಜೋಡಿಗಳು ನೂರು ಕಾಲ ಸುಖಕರವಾ ಬಾಳಲಿ ಎಂದು ಆಶೀರ್ವದಿಸಿದರು. ಮಹಾಂತಯ್ಯ ಸ್ವಾಮಿಗಳು ತದ್ದೇವಾಡಿ ಮಾತನಾಡಿದರು. 18 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹಾವಗಿಲಿಂಗ ಶಿವಾಚಾರ್ಯರು, ಹತ್ತಳ್ಳಿಯ ಗುರು ಗುರುಪಾದೇಶ್ವರ ಶಿವಾಚಾರ್ಯರು, ಈರಯ್ಯ ದೇವರು, ಇಂಡಿ ಸಿಡಿಪಿಒ ವಿಜಯಶ್ರೀ ಬಮ್ಮನಳ್ಳಿ, ಗ್ರಾಪಂ ಅಧ್ಯಕ್ಷ ಶಿವಾನಂದ ಬಿರಾದಾರ, ಸಂತೋಷ ಪಾಟೀಲ, ಶಿವಗೊಂಡ ಬಿರಾದಾರ, ರಾಜುಗೌಡ ಬಿರಾದಾರ, ಸತೀಶ ಹತ್ತಿ, ರಾಜಶೇಖರ ಪಾಟೀಲ, ಸಿದ್ದರಾಮ ಹತ್ತಿ, ಸಿದ್ದರಾಮ ಗಟ್ಟನಟಿ, ಜೆ.ಎ.ವಾಗಮೋರೆ, ಪಿ.ಐ.ಅರವತ್ತಿ, ಬಸವರಾಜ ಬಿರಾದಾರ, ಶ್ರೀಮಂತ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net