ಟ್ಯಾಬ್ಲೆಟ್ ಸದುಪಯೋಗ ಪಡೆಯಿರಿ

Zalaki-23-1
Published on

ಝಳಕಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲಿ ಎಂಬ ಉದ್ದೇಶದಿಂದ ಸರ್ಕಾರ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆಯಬೇಕೆಂದು ಶಾಸಕ ಯಶವಂತಯರಾಯಗೌಡ ಪಾಟೀಲ ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ 135 ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 17 ಜನ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಪ್ರಗತಿಗಾಗಿ ಶಿಕ್ಷಕರ ಪರಿಶ್ರಮ ಇನ್ನು ಹೆಚ್ಚಾಗಬೇಕು. ತಮ್ಮ ಜೀವ ರಕ್ಷಣೆ ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿ ಎಂದು ಹೇಳಿದರು.

ಪ್ರಾಚಾರ್ಯ ಆರ್.ಬಿ.ಶಿತೋಳ್ಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ, ಶ್ರೀಮಂತ ಕಾಪಸೆ, ಗ್ರಾಪಂ ಸದಸ್ಯರಾದ ಹಣಮಂತ ಕೋಳಿ, ಶಂಕರಗೌಡ ಬಿರಾದಾರ, ರಮೇಶಗೌಡ ಪಾಟೀಲ, ಹುಸೇನ್ ಪಾಚಂಗಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net