ಸೈಕಲ್​ ರೇಸ್​ನಲ್ಲಿ ಜಬೀಉಲ್ಲಾ ಪ್ರಥಮ

FotoJet (5)
Published on

ಹುಳಿಯಾರು: ಜಯಕರ್ನಾಟಕ ಸಂಟನೆಯ ನೇತೃತ್ವದಲ್ಲಿ ಸಹೃದಯ ದಾನಿಗಳ ಸಹಕಾರದೊಂದಿಗೆ ಸ್ವಾತಂತ್ರ$್ಯ ದಿನಾಚರಣೆ ಪ್ರಯುಕ್ತ ಶುಕ್ರವಾರ ವೇಗದ ಸೈಕಲ್​ ರೇಸ್​ ಏರ್ಪಡಿಸಲಾಗಿತ್ತು.

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಜಬೀಉಲ್ಲಾ ಅವರಿಗೆ 10 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಬಹುಮಾನ ವಿತರಿಸಲಾಯಿತು. ದ್ವೀತಿಯ ಸ್ಥಾನ ಪಡೆದ ಕನಕಪುರದ ನಿಖಿಲ್​ ಅವರಿಗೆ 5 ಸಾವಿರ ರೂ.ನಗದು, ತೃತೀಯ ಸ್ಥಾನ ಪಡೆದ ಕನಕಪುರ ಪ್ರಮೋದ್​ ಮಿಕ್ಸಿ ಬಹುಮಾನವಾಗಿ ಪಡೆದುಕೊಂಡರು. ಆಕಾಶ್​, ಪ್ರಜ್ವಲ್​, ಶರತ್​, ಅಶೋಕ್​ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಮುಖ್ಯಮಂತ್ರಿಗಳ ಆರೋಗ್ಯ ಸಲಹೆಗಾರ ಡಾ.ರವಿಕುಮಾರ್​ ಮಾತನಾಡಿ, ಸ್ಪರ್ಧೆಯಲ್ಲಿ ಬೈಕ್​ ಸ್ಪೀಡ್​ಗೆ ಸರಿಸಮನಾಗಿ ಅಂದರೆ 70 ಕಿಮೀ. ಸ್ಪೀಡ್​ನಲ್ಲಿ ಗೇರ್​ ಲೆಸ್​ ಸೈಕಲ್​ನಲ್ಲಿ ಸೈಕಲ್​ ತುಳಿಯುತ್ತಿದ್ದನ್ನು ಕಂಡು ಬೆರಗಾಗಿದ್ದೇನೆ. ಕಠಿಣ ಅಭ್ಯಸದಿಂದ ಪಕ್ವತೆ ಲಭಿಸುತ್ತದೆ ಎನ್ನವುದಕ್ಕೆ ಇದು ನಿದರ್ಶನವಾಗಿದೆ. ನಿರಂತರವಾಗಿ ಇಂತಹ ಸ್ಪರ್ಧೆಗಳನ್ನು ಜಯಕರ್ನಾಟಕ ಸಂಟನೆ ಹಮ್ಮಿಕೊಂಡರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ರಾಜ್ಯ ಗ್ರಾಹಕರ ವೇದಿಕೆಯ ಕಾರ್ಯದರ್ಶಿ ಕಾರ್ಗಿಲ್​ಸತೀಶ್​, ಕೆಂಕೆರೆ ಗ್ರಾಪಂ ಅಧ್ಯಕ್ಷ ಮಂಜುನಾಥ್​, ಹುಳಿಯಾರು ಪಪಂ ಸದಸ್ಯ ಮಂಜುನಾಯ್ಕ, ರಾವೇಂದ್ರ,ಎಚ್​.ಬಿ.ಬೈರೇಶ್​, ತಿಮ್ಮರಾಜು, ರಾಮು, ರವಿ, ಕುರಿಹಟ್ಟಿ ಪ್ರಕಾಶ್​, ಟಿ.ಸಿ.ಮಂಜುನಾಥ್​, ವಿಶ್ವನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net