ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಜಬೀನಾ ಪ್ರಥಮ

Zabeena ranks first for Rani Chennamma University
ಬಿಬಿಎ ವಿಭಾಗದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‌್ಯಾಂಕ ಗಳಿಸಿದ ಜಬೀನಾ ಪಣಿಬಂದ ಅವರನ್ನು ಪ್ರಗತಿ ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು. ಎಚ್.ಡಿ. ಬ್ಯಾಕೋಡ, ವಿಜಯಕುಮಾರ ಕುಳಲಿ, ಟಿ.ಐ. ವಸ್ತ್ರದ ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ಪಟ್ಟಣದ ಕೆಂಗೇರಿ ಮಡ್ಡಿ ನಿವಾಸಿ ರಮ್ಜಾನ್‌ಸಾಬ ಪಣಿಬಂದ ಅವರ ಮಗಳು ಜಬೀನಾ ಪಣಿಬಂದ ಬಿಬಿಎ ವಿಭಾಗದಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಶೇ. 91.88 ಅಂಕ ಗಳಿಸುವ ಮೂಲಕ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‌್ಯಾಂಕ್‌ಗಳಿಸಿದ ಹಿನ್ನೆಲೆಯಲ್ಲಿ ಪ್ರಗತಿ ಪ್ರೌಢಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು.

ಜಮಖಂಡಿಯ ಬಿಎಲ್‌ಡಿಇ ಅಸೋಸಿಯೇಷನ್ ಕಾಮರ್ಸ್ ಬಿಎಚ್‌ಎಸ್ ಆರ್ಟ್ಸ್ ಮತ್ತು ಟಿಜಿಪಿ ಸೈನ್ಸ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ಜಬೀನಾ ಅವರು ಪರೀಕ್ಷೆಯಲ್ಲಿ 4200 ಅಂಕಗಳಿಗೆ 3859 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಜಬೀನಾ ಅವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪ್ರಗತಿ ಶಾಲೆ ಮತ್ತು ಪ್ರೌಢ ಶಿಕ್ಷಣವನ್ನು ಕೆಎಲ್‌ಇಎಸ್‌ಸಿಪಿ ಶಾಲೆಯಲ್ಲಿ ಮುಗಿಸಿದ್ದಾರೆ. ಪ್ರಸ್ತುತ ಪ್ರಗತಿ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ವಿಷಯದ ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಗತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಡಿ. ಬ್ಯಾಕೋಡ, ಶಿಕ್ಷಕರಾದ ವಿಜಯಕುಮಾರ ಕುಳಲಿ, ಟಿ.ಐ. ವಸ್ತ್ರದ, ಬಿ.ಬಿ. ಪೂಜಾರಿ, ಬಿ.ಬಿ.ಶಿರಮಗೊಂಡ, ಬಿ.ಎಲ್.ಮನ್ನಿಕೇರಿ, ಶಿಕ್ಷಕಿಯರಾದ ಡಿ.ಜಿ. ದೇಸಾಯಿ, ಎಸ್.ಆರ್.ಅತ್ತಿಮಠದ, ಪಿ ಎಂ. ಕರಿಜಾಡರ, ಎಸ್ ಎಂ. ಬಡಿಗೇರ, ಪಿ.ಎಂ.ಬೆಟಗೇರಿ, ಜೆ ಬಿ. ಹಿರೇಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net