

ಗುರುಪುರ: ಕುಪ್ಪೆಪದವು-ಎಡಪದವು ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಪ್ಪೆಪದವಿನಲ್ಲಿ ಭಾನುವಾರ ನಡೆಯಿತು.
ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಜಯರಾಮ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾರಂಭಗೊಂಡ ಒಂದೆರಡು ವರ್ಷದಲ್ಲೇ ಅಸ್ತಿತ್ವ ಕಳೆದುಕೊಳ್ಳುವ ಸಂಘ-ಸಂಸ್ಥೆಗಳಿಗೆ ಹೋಲಿಸಿದರೆ ಯುವವಾಹಿನಿ ವರ್ಷಗಳಿಂದ ಸಕ್ರಿಯವಾಗಿದ್ದು, ಸಮಾಜಸೇವೆಯಲ್ಲಿ ನಿರತವಾಗಿದೆ. ಯುವವಾಹಿನಿ ಕುಪ್ಪೆಪದವು ಘಟಕಕ್ಕೆ ಎಡಪದವು ಗ್ರಾಮ ಸೇರ್ಪಡೆ ಸಂತೋಷ ತಂದಿದೆ ಎಂದರು.
ಘಟಕದ ಅಧ್ಯಕ್ಷ ಅಕ್ಷಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯಾ ಕೋಟ್ಯಾನ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಶ್ರೀಧರ್ ಪೂಜಾರಿ, ಗೋಪಾಲ ಪೂಜಾರಿ(ಉಪಾಧ್ಯಕ್ಷ), ಅಕ್ಷತಾ(ಕಾರ್ಯದರ್ಶಿ), ರಜನಿ ಕುಂದರ್(ಕೋಶಾಧಿಕಾರಿ) ಆಯ್ಕೆಯಾದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಪ್ರಮಾಣವಚನ ವಿಧಿ ಬೋಧಿಸಿದರು.
ನಿವೃತ್ತ ಶಿಕ್ಷಕಿ ವಿಜಯಮ್ಮ, ಕುಪ್ಪೆಪದವು ಆರೋಗ್ಯ ಕೇಂದ್ರ ನಿವೃತ್ತ ಉದ್ಯೋಗಿ ಚಂದ್ರಶೇಖರ ಬಡಗಬೆಳ್ಳೂರು, ಡಾನ್ಸರ್ ಸಾಕ್ಷ್ಯಾ ಎಡಪದವು ಅವರಿಗೆ ಗೌರವಾರ್ಪಣೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯು ಅಂತಿಮ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ 6 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಜೀವ ಪೂಜಾರಿ, ಭರತ್ ಕೆಂಜಾರು, ಸೋಮಶೇಖರ ಕೋಟ್ಯಾನ್ ಇರುವೈಲು, ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ಅಜಯ್ ಅಮೀನ್ ಮಾಗಂದಡಿ ಸ್ವಾಗತಿಸಿದರು. ಅರುಣ್ ಕುಮಾರ್ ಪ್ರಾಸ್ತಾವಿಸಿದರು. ರೇಣುಕಾ ವರದಿ ಓದಿದರು. ಧನ್ಯಾಶ್ರೀ ಮತ್ತು ಬಿಂದ್ಯಾ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ವಂದಿಸಿದರು.