

ಬಂಟ್ವಾಳ: ನಾರಾಯಣ ಗುರುಗಳ ಸಂದೇಶಗಳು ಕೇವಲ ಘೋಷಣೆಯ ಸಾಲುಗಳಲ್ಲ. ಅವು ನಮ್ಮ ಅಂತರಂಗದ ಭಾವವಾಗಬೇಕು. ಅಧ್ಯಯನ, ಆತ್ಮಾವಲೋಕನ ಮತ್ತು ಸುತ್ತಲಿನ ಜನಜೀವನ ವಿವೇಚಿಸಿದಾಗ ನಾರಾಯಣಗುರು ನಮ್ಮ ಅರಿವಿಗೆ ಬರುತ್ತಾರೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ತಿಳಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹಾಗೂ ಸುರೇಶ್ ಸುವರ್ಣ ಅವರ ನಿವಾಸದಲ್ಲಿ ಗುರುತತ್ವವಾಹಿನಿ ಮಾಲಿಕೆ 25ರ ಗುರು ಸಂದೇಶ ನೀಡಿದರು.
ಕೋಟಿ ಚೆನ್ನಯ ಕ್ರೀಡೋತ್ಸವದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಮಾತನಾಡಿದರು. ಡಾ.ಯೋಗೀಶ್ ಕೈರೋಡಿ ಹಾಗೂ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಅವರನ್ನು ಗೌರವಿಸಲಾಯಿತು.
ಸಂಗೀತ ವಾದಕ ರಾಜೇಶ್ ಅಮ್ಟೂರು, ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ನಿರ್ದೇಶಕ ಮಹೇಶ್, ಮಧುಸೂದನ್ ಮಧ್ವ, ಮಾಜಿ ಅಧ್ಯಕ್ಷ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ., ಅರುಣ್ ಬಿ.ಸಿ.ರೋಡ್, ರಾಜೇಶ್ ಸುವರ್ಣ, ಸದಸ್ಯರಾದ ಜಗನ್ನಾಥ್ ಸುವರ್ಣ, ಶೈಲೇಶ್ ಕುಚ್ಚಿಗುಡ್ಡೆ, ಅರ್ಜುನ್ ಅರಳ, ಸುನಿತಾ ನಿತಿನ್, ಸುಲತಾ, ಯಶೋಧರ ಕಡಂಬಳಿಕೆ, ರಚನಾ ಕರ್ಕೇರ, ಸುರೇಶ್ ಸುವರ್ಣ, ಮಲ್ಲಿಕಾ ಸುರೇಶ್ ಕರ್ಪೆ, ಪ್ರಶಾಂತ್ ಏರಮಲೆ, ಯೋಗೀಶ್ ಕರ್ಪೆ, ರತ್ನಾಕರ್, ಸುದೀಪ್ ಸಾಲ್ಯಾನ್ ರಾಯಿ, ನಿಕೇಶ್ ಕೊಟ್ಯಾನ್ ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು.