ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ: ರವಿರಾಜ ಅಂಕೋಲೆಕರ್‌

Yuvajanotsava
Published on

ಕಾರವಾರ: ಸರ್ಕಾರ ಯುವಜನೋತ್ಸವದಂತಹ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದು, ಯುವಜನತೆ ಈ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯಬೇಕು. ಜೀವನದಲ್ಲಿ ಸಾಧಿಸುವ ಗುರಿ ಇದ್ದಾಗ ಮಾತ್ರ ಏನನ್ನಾದರೂ ಸಾಧಿಸಬಹುದು. ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲ,ಭಾಗವಹಿಸುವುದು ಮುಖ್ಯ ಎಂದು ನಗರಸಭೆ ಅದ್ಯಕ್ಷ ರವಿರಾಜ ಅಂಕೋಲೆಕರ್ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವೈದ್ಯಕೀಯ ವಿಜ್ಞಾನ

ಗಳ, ಸಂಸ್ಥೆ ಕಾರವಾರ ಹಾಗೂ ಜಿಲ್ಲಾ ಯುವ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವ

ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಪೂರ್ಣಿಮಾ ಮಾತನಾಡಿ, ಯುವ ಜನರು ದೇಶದ ಕಲೆ, ಸಂಸ್ಕೃತಿಯನ್ನು

ಪ್ರತಿಬಿಂಬಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರತಿಭೆಗಳಿವೆ. ಅವರಲ್ಲಿ ಹುದುಗಿರುವ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಿ

ಸಮಾಜದ ಮುನ್ನೆಲೆಗೆ ತರುವಲ್ಲಿ ಯುವ ಜನೋತ್ಸವದಂತಹ ವೇದಿಕೆಗಳು ಪ್ರಮುಖವಾಗಿವೆ ಎಂದರು.

ಜಿಲ್ಲಾ ಯುವ ಒಕ್ಕೂಟ ಕಾರ್ಯದರ್ಶಿ ದಿಲೀಪ್ ಕೋಠಾರಕರ ಮಾತನಾಡಿ, ಸ್ವಾಮಿ ವಿವೇಕಾನಂದರ ಏಳಿ ಎದ್ದೇಳಿ ಗುರಿ

ಮುಟ್ಟುವ ತನಕ ನಿಲ್ಲದಿರಿ ಘೋಷಣೆಯನ್ನು ಪ್ರತಿ ಸ್ಪರ್ಧಾಳುಗಳು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಿ, ಜಿಲ್ಲಾ ಮಟ್ಟದಲ್ಲಿ

ವಿಜೇತರಾದ ಸ್ಪರ್ಧಾಳುಗಳು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತರುವಂತರಾಗಬೇಕು ಎಂದರು.

ಅಮದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ಪೋಷಕರು ಮಕ್ಕಳಿಗೆ ವಿದ್ಯಾಬ್ಯಾಸ

ಕೊಡಿಸುವುದರ ಜೊತೆಯಲ್ಲಿ ಕಲೆ, ಸಂಸ್ಕೃತಿ, ಕ್ರೀಡಾಗಳಲ್ಲಿ ಪ್ರೋತ್ಸಾಹ ನೀಡಿದಾಗ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ.

ಪ್ರತಿ ಕಲೆಗೂ ತನ್ನದೇ ಆದ ಮಹತ್ವ ಹೊಂದಿದೆ. ಪ್ರತಿಭೆ ಯಾರ ಸ್ವತ್ತು ಅಲ್ಲ, ಇದಕ್ಕೆ ಬಡವ, ಶ್ರೀಮಂತ, ಮೇಲು–ಕೀಳು ಬೇಧ

ಭಾವವಿಲ್ಲ ಆದರೆ ಒಂದೇ ಕಲೆಯಲ್ಲಿ ಸತತ ಪ್ರಯತ್ನ, ಪರಿಶ್ರಮ ಪಟ್ಟರೆ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ

ಮಾತನಾಡಿ, ಕಾರ್ಯಕ್ರಮದಲ್ಲಿ 3 ಗುಂಪು ಹಾಗೂ 4 ವೈಯಕ್ತಿಕ ಸ್ವರ್ಧೆಗಳು ಸೇರಿದಂತೆ ಒಟ್ಟು 7 ಸ್ಪರ್ಧೆಗಳು ಆಯೋಜಿಸಲಾಗಿದ್ದು,

ಸ್ಪರ್ಧಾಳುಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ತಹಶೀಲ್ದಾರ ಪ್ರಮೋದ ನಾಯ್ಕ, ರಾಜ್ಯ ಮತ್ತು

ರಾಷ್ಟç ಪ್ರಶಸ್ತಿ ಪುರಸ್ಕೃತ ಅಭಿಶೇಕ ಕಳಸ, ನಿರ್ಣಾಯಕರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯುವ ಜನೋತ್ಸವದ ಅಂಗವಾಗಿ ಯುವಜನತೆಗಾಗಿ, ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ,

ಕವಿತೆ ಬರೆಯುವುದು, ವಿಜ್ಞಾನ ಮೇಳದ ಪ್ರದರ್ಶನ ಸ್ಪರ್ದೇಗಳನ್ನು ಆಯೋಜಿಸಲಾಗಿದ್ದಿತು, ಜಿಲ್ಲೆಯ ವಿವಿಧ ತಾಲೂಕುಗಳಿಂದ

ಆಗಮಿಸಿದ್ದ ಯುವಜನರು ತಮ್ಮ ಕಲಾ ಮತ್ತು ಪ್ರತಿಭಾ ಪ್ರೌಢಿಮೆಯನ್ನು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net