ಜಿಲ್ಲಾ ಮಟ್ಟದ ಮ್ಯಾರಥಾನ್​ಗೆ ಚಾಲನೆ

udp-27-marathon
Published on

ಉಡುಪಿ: ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಅಜ್ಜರಕಾಡು ಡಾ. ಜಿ.ಶಂಕರ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 5 ಕಿ.ಮೀ ವರೆಗೆ ಮ್ಯಾರಥಾನ್​ ನಡೆಯಿತು.

ಏಡ್ಸ್​ ಬಗ್ಗೆ ಅರಿವು ,ಸೇವಾ ಸೌಲಭ್ಯಗಳ ಮಾಹಿತಿ,ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಏಡ್ಸ್​ ಕಾಯ್ದೆ 2017 , ಎಸ್​.ಟಿ.ಐ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಓಟದ ಮುಖ್ಯ ಉದ್ದೇಶವಾಗಿದ್ದು, ಪುರುಷರ ವಿಭಾಗದ 5 ಕಿ,ಮೀ ಮ್ಯಾರಥಾನ್​ ಓಟಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಶಾಂತವೀರ ಶಿವಪ್ಪ ಹಾಗೂ ಮಹಿಳೆಯರ ವಿಭಾಗದ 5 ಕಿ.ಮೀ. ಮ್ಯಾರಥಾನ್​ ಓಟಕ್ಕೆ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಡಾ. ನಾಗಭೂಷಣ್​ ಉಡುಪ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಚಿದಾನಂದ್​ ಸಂಜು , ಡಾ ಜಿ.ಶಂಕರ್​ ಪ್ರಥಮ ದರ್ಜೆ ಕಾಲೇಜಿನ ಎನ್​ಎಸ್​ಎಸ್​ ಅಧಿಕಾರಿ ರಾಜೇಂದ್ರ , ದೈಹಿಕ ಶಿಕ್ಷಣ ನಿರ್ದೇಶಕ ಪಾಟ್ಕರ್​. ಅಮೆಚೂರ್​ ಅಥ್ಲೆಟಿಕ್​ ಉಡುಪಿಯ ಕಾರ್ಯದರ್ಶಿ ದಿನೇಶ್​, ಲಯನ್ಸ್​ ಕ್ಲಬ್​ನ ಧನುಷ್​, ರೋಟರಿ ಕ್ಲಬ್​ ಉಡುಪಿ ಮಿಡ್​ ಟೌನ್​ ಅಧ್ಯಕ್ಷ ಭುಜಂಗಶೆಟ್ಟಿ, ರೋಟರಿ ಕ್ಲಬ್​ ಕಲ್ಯಾಣಪುರ ಅಧ್ಯಕ್ಷ ರೋ. ದಿವಾಕರ್​ ಪೂಜಾರಿ ಉಪಸಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್​ ಕುಮಾರ್​ ಶೆಟ್ಟಿ ಸ್ವಾಗತಿಸಿದರು. ಮಂಜುನಾಥ ಗಾಣಿಗ ನಿರೂಪಿಸಿದರು. ಮ್ಯಾರಾಥಾನ್​ ನಲ್ಲಿ 348 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜೇತರಿಗೆ ಬಹುಮಾನ ವಿತರಣೆ
ಐದು ಕಿಲೋಮೀಟರ್​ ಮ್ಯಾರಥಾನ್​ ಪುರುಷ ವಿಭಾಗದಲ್ಲಿ ಎಂಜಿಎಂ ಕಾಲೇಜ್​ನ ಪ್ರಯಾಗ ಸಿ ಶೆಟ್ಟಿ (ಪ್ರಥಮ), ಬೋರ್ಡ್​ ಕಾಲೇಜ್​ನ ಪ್ರಜ್ವಲ್​ ಗೋಣಿ, (ದ್ವೀತಿಯ), ನಾಗರಾಜ ಸುರೇಶ ಅರಾವತ (ತೃತಿಯ), ಮಹಿಳೆಯರ ಐದು ಕಿಲೋ ಮೀಟರ್​ ಮ್ಯಾರಥಾನ್​ ವಿಭಾಗದಲ್ಲಿ ಎಂಜಿಎಂ ಕಾಲೇಜ್​ನ ನಂದಿನಿ ಎನ್​ ಎಸ್​ . (ಪ್ರಥಮ), ನಿಟ್ಟೆ ಎನ್​.ಎಸ್​.ಎ.ಎಂ. ಕಾಲೇಜ್​ನ ಪ್ರತಿಕ್ಷ (ದ್ವೀತಿಯ), ಡಾ ಜಿ ಶಂಕರ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಚಂದ್ರಿಕಾ (ತೃತೀಯ) ಸ್ಥಾನ ಗಳಿಸಿದರು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net