ನ.3ರಂದು ಯುವ ವಿಪ್ರ ಕ್ರೀಡೋತ್ಸವ

Published on

ಬೆಳ್ತಂಗಡಿ: ತಾಲೂಕು ತುಳು ಶಿವಳ್ಳಿ ಸಭಾದ ಯುವ ವಿಪ್ರ ವೇದಿಕೆಯ ವತಿಯಿಂದ ವಿಪ್ರ ಕ್ರೀಡೋತ್ಸವ-2024 ನ.3ರಂದು ಉಜಿರೆ ಅಜ್ಜರಕಲ್ಲು ಕ್ರೀಡಾಂಗಣದಲ್ಲಿ ನಡೆಯಲಿದೆ.

ಪುರುಷರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ(ಹೊನಲು ಬೆಳಕು)ದಲ್ಲಿ ಆಯ್ದ 16 ತಂಡಗಳು ಭಾಗವಹಿಸಲಿದ್ದು, ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ, ಡಾಜ್ ಬಾಲ್, ಸ್ಪಾಟ್ ಗೇಮ್ಸ್, ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ಮನರಂಜನಾ ಆಟಗಳು ನಡೆಯಲಿವೆ ಎಂದು ತಾಲೂಕು ಯುವ ವಿಪ್ರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net