

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕಾರ್ಯಕ್ರಮಗಳ ವೇದಿಕೆಯಲ್ಲಿ ಗುಲಾಬಿ ಬದಲು ಪೆನ್ ನೀಡುವುದರಿಂದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುವ ಜತೆ ಹಣ ಪೋಲಾಗುವುದು ಉಳಿಯುತ್ತದೆ. ತಾಯಿ ಸ್ಥಾನದಲ್ಲಿರುವ ಮಾತೃಸಂಘವನ್ನು ಮರೆಯಬಾರದು. ಮುಂದಿನ ಸಮಿತಿ ಉತ್ತಮ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು. 48 ದಿನ ನಡೆದ ಭಜನೆಯ ಬಳಿಕ ಯುವವಾಹಿನಿಗೆ ಶಕ್ತಿ ಬಂದಿದೆ ಎಂದು ಯುವವಾಹಿನಿ ಗ್ರಾಮ ಚಾವಡಿ ಕೊಣಾಜೆ ಘಟಕ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ ಅಭಿಪ್ರಾಯಪಟ್ಟರು.
ಯುವವಾಹಿನಿ ಗ್ರಾಮ ಚಾವಡಿ ಕೊಣಾಜೆ ಘಟಕದ ಗ್ರಾಮ ಚಾವಡಿ ನಾರಾಯಣ ಗುರು ಸಮುದಾಯ ಭವನದಲ್ಲಿ ಭಾನುವಾರ ನಡೆದ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಮಂಗಳೂರು ಇದರ ಆರ್ಥೊಪೆಡಿಕ್ ವಿಭಾಗ ಮುಖ್ಯಸ್ಥ ಡಾ.ಆಶಿತ್ ಎಂ.ವಿ. ಮಾತನಾಡಿ, ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವವರು ಮೊದಲು ಸಧೃಡರಾದರೆ ಸಮಾಜಕ್ಕೆ ಸೇವೆ ನೀಡಲು ಸಾಧ್ಯ. ವೃತ್ತಿಯಲ್ಲಿ ಎಷ್ಟೇ ಒತ್ತಡದಲ್ಲಿದ್ದರೂ ಸಮುದಾಯದ ಸಂಘಟನೆಗಾಗಿ ಸಮಯ ಮೀಸಲಿಡಬೇಕು. ಯುವ ಸಮುದಾಯ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಗ್ರಾಮ ಚಾವಡಿ ಕೊಣಾಜೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಧ್ಯಕ್ಷ ರವೀಂದ್ರ ಬಂಗೇರ ಕೊಣಾಜೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಬ್ರೈಟ್ ಗ್ಲೋಬ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮೋಹನ್ ರಾಜ್, ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ.ಕುಂದರ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಜೇಶ್ ವಿಟ್ಲ, ಯುವವಾಹಿನಿ ನಿಯೋಜಿತ ಅಧ್ಯಕ್ಷ ಬಾಬು ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಪ್ರಥಮ ಉಪಾಧ್ಯಕ್ಷ ವಿಜೇತ್ ಪಜೀರ್ ಸ್ವಾಗತಿಸಿದರು. ಕಾರ್ಯದರ್ಶಿ ಅಜಿತ್ ಪೂಜಾರಿ ಪಜೀರ್ ವರದಿ ವಾಚಿಸಿದರು. ಮಿಥುನ್ ಪಜೀರ್ ವಂದಿಸಿದರು. ಸುರೇಖಾ ಎಚ್.ಪೂಜಾರಿ, ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಮಂಜನಾಡಿ ದುರಂತ ಸಂತ್ರಸ್ತ ಕುಟುಂಬಕ್ಕೆ ಧನ ಸಹಾಯದ ಚೆಕ್ ಹಸ್ತಾಂತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ, ವಿವಿಧ ಕ್ಷೇತ್ರದ ಸಾಧಕರು, ಸಮಾಜಸೇವಕರು, ನವದಂಪತಿಗಳನ್ನು ಸನ್ಮಾನಿಸಲಾಯಿತು.
ಸಮುದಾಯದ ಯುವಕರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಯುವವಾಹಿನಿ ಘಟಕ ಸ್ಥಾಪಿಸಲಾಗಿದ್ದು ಸಂಘಟನೆಯ ಧ್ಯೇಯದಂತೆ ವಿದ್ಯೆ, ಉದ್ಯೋಗಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಒಂದೇ ವರ್ಷದಲ್ಲಿ 140 ಮಂದಿಯನ್ನು ಸದಸ್ಯರನ್ನಾಗಿಸುವ ಮೂಲಕ ಸಂಪರ್ಕ ಸಾಮರ್ಥ್ಯ ತೋರಿಸಿದೆ. ರವೀಂದ್ರ ಬಂಗೇರ ಕೊಣಾಜೆ ಅಧ್ಯಕ್ಷ, ಗ್ರಾಮಚಾವಡಿ ಕೊಣಾಜೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ https://www.vijayavani.net/bjp-protest-in-kasaragod https://www.vijayavani.net/classes-begin-at-sri-rama-educational-institute \