ಯುವ ಚೈತನ್ಯ ಸಮಾವೇಶ ಪೂರ್ವಭಾವಿ ಸಭೆ

24-DVD-2 (VEERESH)
Published on

ದೇವದುರ್ಗ: ಜೆಡಿಎಸ್‌ನಲ್ಲಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಜತೆಗೆ ಸ್ವಾಭಿಮಾನಿ ರೈತರ ವೇದಿಕೆಯಿಂದ ನೀಡಿದ್ದ ಬೆಂಬಲ ವಾಪಸ್ ಪಡೆಯುವುದಾಗಿ ಸ್ವಾಭಿಮಾನಿ ರೈತರ ವೇದಿಕೆ ಕಾರ್ಯಾಧ್ಯಕ್ಷ ವೀರೇಶ ಪಾಟೀಲ್ ಹೂವಿನಹೆಡಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಜೆಡಿಎಸ್ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಹೂವಿನಹೆಡಗಿ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಯುವ ಚೈತನ್ಯ ಸಮಾವೇಶದ ಪೂರ್ವಭಾವಿ ಸಭೆಯನ್ನು ಮಾ.25ರಂದು ಕರೆಯಲಾಗಿದೆ ಎಂದು ವೀರೇಶ ಪಾಟೀಲ್ ತಿಳಿಸಿದರು. ಪ್ರಮುಖರಾದ ಶರಣು, ಶಾಂತಕುಮಾರ, ರಮೇಶ, ಚಂದ್ರಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net