

ಹಾವೇರಿ: ಚಿಕ್ಕೋಡಿ ತಾಲೂಕಿನ ಜೈನ ಮುನಿಗಳು ಮತ್ತು ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ಅವರ ಹತ್ಯೆಯನ್ನು ಖಂಡಿಸಿ ಹಾವೇರಿಯ ಜಿಲ್ಲಾಡಳಿತ ಭವನದ ಎದುರಿಗೆ ಮಂಗಳವಾರ ಯುವಾ ಬ್ರಿಗೇಡ್ ವತಿಯಿಂದ ಪ್ರತಿಭಟನೆ ಮಾಡಲಾಯಿತು. ನಂತರ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು. ಈ ಸಭೆಯಲ್ಲಿ ಹಿಂದು ಕಾರ್ಯಕರ್ತರಾದ ಶಶಿಧರ ಹೊಸಳ್ಳಿ, ಅಭಿಷೇಕ ಉಪ್ಪಿನ, ಮಂಜುನಾಥ ಯರವಿನತಲಿ, ಪ್ರಮೋದ ಮೆಳ್ಳಾಗಟ್ಟಿ, ಚನ್ಮಮ್ಮ ಬ್ಯಾಡಗಿ, ಬಸು ರಾಜನಹಳ್ಳಿ, ಸಂತೋಷ ಹೊಂಬಳಿ, ನಿಖಿಲ ಹಿರೇಮಠ, ಇತರರಿದ್ದರು.