ಯುವ ಬ್ರಿಗೇಡ್‌ನಿಂದ ಸ್ವಚ್ಛತಾ ಕಾರ್ಯ, ಸುಲ್ತಾನಪುರ ಬೃಹನ್ಮಠದಲ್ಲಿ ಶ್ರಮದಾನ

090320 Gabburu Bruhanmath Shramadhana
Published on

ದೇವದುರ್ಗ: ತಾಲೂಕಿನ ಗಬ್ಬೂರು ಸಮೀಪದ ಶ್ರೀ ಕ್ಷೇತ್ರ ಸುಲ್ತಾನಪುರದಲ್ಲಿ ಶ್ರೀ ಪಂಚಾಕ್ಷರಿ ಜಾತ್ರಾ ಮಹೋತ್ಸವ ನಿಮಿತ್ತ ಗಬ್ಬೂರಿನ ಯುವಾ ಬ್ರಿಗೇಡ್ ಸಂಘಟನೆಯ ಮುಖಂಡರು ಭಾನುವಾರ 55ನೇ ವಾರದ ಸ್ವಚ್ಛತಾ ಅಭಿಯಾನ ಕೈಗೊಂಡರು.

ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ಶ್ರಮದಾನಕ್ಕೆ ಚಾಲನೆ ನೀಡಿ, ಯುವಾ ಬ್ರಿಗೇಡ್ ಸಂಘಟನೆ ಮುಖಂಡರ ಕಾರ್ಯ ಶ್ಲಾಘನೀಯ. ಪ್ರತಿ ಭಾನುವಾರ ವಿವಿಧ ಸ್ಥಳಗಲ್ಲಿ ಸ್ವಚ್ಛತೆ ಕೈಗೊಂಡು, ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿರುವುದು ಮೆಚ್ಚುವಂತದ್ದು ಎಂದರು.

ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ನೂರಾರು ಯುವಕರು ಶ್ರೀ ಮಠದ ಆವರಣದ ಸುತ್ತ ಸ್ವಚ್ಛತೆ ಕೈಗೊಂಡರು. ದೇವಸ್ಥಾನದಲ್ಲಿ ಬೆಳೆದಿದ್ದ ಮುಳ್ಳುಕಂಠಿ ಕಿತ್ತು ಸುಟ್ಟರು. ಅಲ್ಲಲ್ಲಿ ಬಿದ್ದದ್ದ ತೆಂಗಿನಕಾಯಿ, ಪ್ಲಾಸ್ಟಿಕ್ ವಸುಗಳನ್ನು ವಿಲೇವಾರಿ ಮಾಡಿದರು. ಬೆಳಗ್ಗೆ 6ರಿಂದ 9 ರವರೆಗೆ ಶ್ರಮದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net