ಶಿಕ್ಷಣ ದಾಸೋಹಕ್ಕೆ ಮಠಗಳ ಕೊಡುಗೆ ಅಪಾರ,  ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿಕೆ

IMG_20241128_210729_376.jpg
Published on

ಹುಬ್ಬಳ್ಳಿ: ಕರ್ನಾಟಕದಲ್ಲಿ ಲಿಂಗಾಯತ ಮಠಗಳು ಶಿಣ ಹಾಗೂ ಅನ್ನ ದಾಸೋಹಕ್ಕೆ ತಮ್ಮದೇ ಆದ ಅಮೋಘ ಕೊಡುಗೆ ನೀಡಿವೆ. ಬಸವಾದಿ ಶರಣರ ಚಿಂತನೆಗಳು ನನ್ನ ಮೇಲೂ ಸಾಕಷ್ಟು ಪ್ರಭಾವ ಬೀರಿವೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

ಇಲ್ಲಿಯ ಬಸವ ಕೇಂದ್ರದ ಯುವ ಟಕದ ವತಿಯಿಂದ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ವಿಚಾರಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅವು ಮಾನವೀಯತೆಗೆ ಸಂಬಂಧಪಟ್ಟಿವೆ. ಅದ್ಭುತ ವಚನ ಸಾಹಿತ್ಯವನ್ನು ಬಸವಾದಿ ಶರಣರು ಈ ನಾಡಿಗೆ ನೀಡಿದ್ದಾರೆ. ಎಲ್ಲ ವರ್ಗದವರನ್ನು ಸೇರಿಸಿಕೊಂಡು ಅನುಭವ ಮಂಟಪ ಕಟ್ಟಿದರು. ಇಂದು ಮಕ್ಕಳಿಗೆ ವಚನಗಳನ್ನು ಹೇಳಿ ಕೊಡಬೇಕು. ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ವಚನಗಳು ದಾರಿದೀಪವಾಗಿವೆ ಎಂದರು.

ಉಪ ಆಯುಕ್ತ ರವೀಶ್ ಸಿ.ಆರ್. ಮಾತನಾಡಿ, ಬಸವಾದಿ ಶರಣರು ಅರಿವು, ಕಾಯಕ, ದಾಸೋಹದ ಮಹತ್ವವನ್ನು ಜನರಿಗೆ ತಿಳಿಸಿಕೊಟ್ಟರು ಎಂದರು.

ಯುವ ಲೆಕ್ಕಪರಿಶೋಧಕಿ ಪೂಜಾ ಕರವೀರಶೆಟ್ಟರ ಅವರನ್ನು ಗೌರವಿಸಲಾಯಿತು.

ಬಸವ ಕೇಂದ್ರ ಯುವ ಟಕದ ಅಧ್ಯ ಅನಿಲ ಲಿಂಗಶೆಟ್ಟರ, ಬಸವ ಕೇಂದ್ರದ ಅಧ್ಯ ಪ್ರೊ. ಜಿ.ಬಿ. ಹಳ್ಯಾಳ, ಶೋಭಾತಾಯಿ ಕರವೀರಶೆಟ್ಟರ, ಗಿರೀಶ ಪಟ್ಟಣಶೆಟ್ಟಿ, ಸುರೇಶ ಹುಗ್ಗಿಶೆಟ್ಟರ, ಸಂತೋಷ ಕತ್ತಿಶೆಟ್ಟರ, ಗುರುರಾಜ ಜಾಡಗೌಡರ, ಕಲ್ಲಪ್ಪ ಗುಂಜಾಳ, ಡಾ. ಸುರೇಶ ಹೊರಕೇರಿ, ಬಸವರಾಜ ಲಿಂಗಶೆಟ್ಟರ, ನೀಲಕಂಠ ಅಸೂಟಿ, ಪ್ರೊ. ಎಸ್.ವಿ. ಪಟ್ಟಣಶೆಟ್ಟಿ, ಪ್ರಭು ಅಂಗಡಿ, ನಿಖಿಲ್ ಅಂಗಡಿ, ಕೆ.ಎಸ್. ಇನಾಮತಿ, ಎಂ.ಬಿ. ಕಟ್ಟಿ, ಡಾ, ಸಂಜನಾ ಚಪ್ಪಳಗಾಂವಿ, ದಾಕ್ಷಾಯಣಿ ಕೋಳಿವಾಡ, ಶಂಕರ ಕೋಳಿವಾಡ, ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net