ವಿಜಯಪುರ: ಶಿವಾಜಿ ಮಹಾರಾಜರು ಜೀವನದ ಆದರ್ಶ ಮೌಲ್ಯಗಳೊಂದಿಗೆ ಭಾರತೀಯ ಸಂಸತಿ, ಪರಂಪರೆ, ಇತಿಹಾಸ ಮೈಗೂಡಿಸಿಕೊಂಡು ಸ್ವರಾಜ್ಯದ ಪರಿಕಲ್ಪನೆಯಲ್ಲಿ ಸಿ ಗೌರವ, ಗೋ ಸಂರಣೆ ಹಾಗೂ ಧರ್ಮರಣೆಗೆ ಪ್ರಥಮ ಪ್ರಾಶಸ ನೀಡಿದರು ಎಂದು ಶಿವಾಜಿ ಮಹಾರಾಜ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಉಪಾಧ್ಯಕ್ಷ ಸಂಜಯ ಜಂಬೂರೆ ಹೇಳಿದರು.
ನಗರದ ಪಿಡಿಜೆ ಪ.ಪೂ. ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರ ಯೋಚನೆ, ಯೋಜನೆ, ಸಮಯಪ್ರೆ ಕಾರ್ಯಾನುಷ್ಠಾನದ ಸಾಮರ್ಥ್ಯ ನಮ್ಮೆಲ್ಲರಿಗೂ ಪ್ರೇರಣೆದಾಯಕ ಎಂದರು.
ಶಿವಾಜಿ ಮಹಾರಾಜರು ತುಳಜಾಭವಾನಿಯ ಕೃಪಾಶೀರ್ವಾದ, ತಾಯಿ ಜೀಜಾಮಾತೆಯ ಮಾರ್ಗದರ್ಶನ ಹಾಗೂ ದಾದಾಜಿ ಕೊಂಡರ ಗುರು ಕೃಪೆಯಿಂದ ಚಾರಿತ್ರವಂತರಾಗಿ ಬೆಳೆದು ರಾಜ ಪ್ರತ್ಯ ಪರಮಾತ್ಮನೆಂಬಂತೆ ಬದುಕಿದರು ಎಂದು ತಿಳಿಸಿದರು.
ಅತಿಥಿ ಶಿವಾಜಿ ಮಹಾರಾಜ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಶಂಕರ ಕನಸೆ ಮಾತನಾಡಿ, ಶಿವಾಜಿ ಮಹಾರಾಜರು ಅನ್ಯಾಯ, ಅತ್ಯಾಚಾರ, ಶೋಷಣೆಯ ಪರಾಕಾಷ್ಠೆಯ ಗರ್ಭ ಸೀಳಿ ಅಧರ್ಮವನ್ನು ಅಳಿಸಿ, ಸ್ವಧರ್ಮಾಧಾರಿತ ಸ್ವರಾಜ್ಯ ಸ್ಥಾಪಿಸಿದ ಯುಗಪುರುಷ ಎನಿಸಿಕೊಂಡಿದ್ದಾರೆ ಎಂದು ತಿಳಿಸಿದ ಅವರು, ಶಾಲೆಗೆ ಶಿವಾಜಿಯ ಪ್ರತಿಮೆ ನೀಡುವುದಾಗಿ ವಾಗ್ದಾನ ಮಾಡಿದರು.
ಉಪ ಪ್ರಾಚಾರ್ಯ ಎಂ.ಎ. ಆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಾಜಿ ಮಹಾರಾಜರ ಬದುಕಿನ ಸಂದೇಶ ಭಾರತೀಯರ ಹೃದಯ
ಮ್ರಾಜ್ಯದಲ್ಲಿ ಸ್ವಾಭಿಮಾನದ ದೀಪ್ತಿಯನ್ನು ಹೊತ್ತಿಸಿ ಜಗವೆಲ್ಲ ಬೆಳಗಲಿ ಭವಿಷ್ಯದ ಭಾರತ ವಿಶ್ವಗುರುವಾಗಲಿ ಎಂದರು.
ಅನಘಾ ದೇವೂರಕರ ಹಾಗೂ ವಿವೇಕ ಕಂದಗಲ ಶಿವಾಜಿ ಮಹಾರಾಜರ ಕುರಿತು ಭಾಷಣ ಮಾಡಿದರು. ಶಾಲಾ ಪ್ರಧಾನ ಮಂತ್ರಿ
ವಾಣಿಶ್ರೀ ಕಂಬಾರ ಮತ್ತಿತರರಿದ್ದರು.