

ಹುಬ್ಬಳ್ಳಿ: ಯುಗಾದಿ ಚೈತ್ರ ಗೌರೀ ಹಬ್ಬಗಳ ಪ್ರಯುಕ್ತ ಇಲ್ಲಿಯ ವಿಜಯನಗರ ಮಹಿಳಾ ಮಂಡಳದ ವತಿಯಿಂದ ಅರಿಷಿಣ ಕುಂಕುಮ ಹಾಗೂ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂಧ್ಯಾ ದೀಕ್ಷಿತ ಮತ್ತು ರಾಜಶ್ರೀ ವೈದ್ಯ ಅವರು ಯುಗಾದಿ ಕವನಗಳ ಮೂಲಕ ಗಮನ ಸೆಳೆದರು.
ಮಂಡಳದ ಅಧ್ಯಕ್ಷೆ ಶಾಂತಾ ನಾಡಗೀರ, ಹಬ್ಬಗಳ ಆಚರಣೆಯ ಮಹತ್ವ, ಅವುಗಳಿಗಿರುವ ವೈಜ್ಞಾನಿಕ, ಪೌರಾಣಿಕ ಆಧಾರಗಳನ್ನು ತಿಳಿಸಿದರು. ಹಬ್ಬಗಳಿಂದಾಗುವ ಸುಖ ಸಮೃದ್ಧಿ, ಪರಸ್ಪರ ಒಕ್ಕಟ್ಟು, ಹಬ್ಬಗಳ ಮೂಲ ಉದ್ದೇಶ, ಮಹಿಳೆಯರಲ್ಲಿರುವ ವಿವಿಧ ಕೌಶಲಗಳ ಪ್ರಚಾರಕ್ಕೆ ಅವಕಾಶ ಮುಂತಾದ ಅಂಶಗಳ ಬಗ್ಗೆ ವಿವರಿಸಿದರು.
ಗಿರಿಜಾ ಚಿಕ್ಕಮಠ, ಸಂಧ್ಯಾ ಪ್ರಭು, ನಿರ್ಮಲಾ ಮಾನೆ, ಸ್ವಾತಿ, ಸವಿತಾ, ಅಪರ್ಣಾ, ರಾಜಶ್ರೀ, ರಜನಿ, ಶಾರದಾ ಇತರರು ಪಾಲ್ಗೊಂಡಿದ್ದರು.