ದ್ವಿತೀಯ ಪಿಯುಗೆ ಯುಟ್ಯೂಬ್ ಕ್ಲಾಸ್

Yiutube
Published on

ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಜು.23ರಂದು ಯುಟ್ಯೂಬ್​ನಲ್ಲಿ ಲೈವ್ ವಿಡಿಯೋಗಳ ಬೋಧನೆ ಆರಂಭಿಸಲಿದೆ. ಪ್ರತಿ ದಿನ 45 ನಿಮಿಷಗಳ 4 ತರಗತಿಗಳನ್ನು ನಡೆಸಲಾಗುತ್ತಿದೆ.

ಪ್ರತಿದಿನ ಬೆಳಗ್ಗೆ 9ರಿಂದ 12 ಗಂಟೆವರೆಗೆ ಪಾಠಗಳನ್ನು http://www.youtube.com/c/dpuedkpucpa ಲಿಂಕ್​ನಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್, ಇಂಟರ್​ನೆಟ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಬೇಡ. ಕಾಲೇಜು ಆರಂಭವಾದ ಮೇಲೆ ಮತ್ತೊಮ್ಮೆ ಪಾಠಗಳನ್ನು ಉಪನ್ಯಾಸಕರ ಮೂಲಕ ಬೋಧಿಸಲಾಗುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net