

ಸಂಡೂರು: ಜೀವ ಉಳಿಸಲು ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಮಿನೆರ ಕಾರ್ಖಾನೆಯ ನಿರ್ದೇಶಕ ಟಿ.ಹನುಮಂತರೆಡ್ಡಿ ಹೇಳಿದರು.
ಸುಲ್ತಾನಪುರ ಗ್ರಾಮದ ಮಿನೇರಾ ಕಾರ್ಖಾನೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ರಕ್ತದಾನ ಮಾಡಿ ಜೀವ ಉಳಿಸಿ
ಹೆರಿಗೆ ಸಮಯದಲ್ಲಿ ಮಹಿಳೆಯರಿಗೆ ಮತ್ತು ಅಪಘಾತವಾದ ಸಮಯದಲ್ಲಿ ರಕ್ತ ಸಹಾಯವಾಗುತ್ತದೆ. 18 ರಿಂದ 60 ವಯಸ್ಸಿನ ಆರೋಗ್ಯವಂತ ಯುವಕರು 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು. ಕಾರ್ಖಾನೆ ಉಪಾಧ್ಯಕ್ಷ ಗಿರೀಶ್ ಕುಮಾರ್ ಮಾತನಾಡಿದರು.
ಎಚ್‌ಆರ್ ವಿಭಾಗದ ವ್ಯವಸ್ಥಾಪಕ ವಾಸುದೇವರಾವ್, ಉಪ ವ್ಯವಸ್ಥಾಪಕ ದಿನೇಶರೆಡ್ಡಿ, ಸಹಾಯಕ ವ್ಯವಸ್ಥಾಪಕ ಮುರಳೀಧರರಾವ್, ವೈದ್ಯಾಧಿಕಾರಿ ಡಾ.ಭೀಮಣ್ಣ, ಪ್ರಮುಖರಾದ ನಜೀರ್ ಅಹ್ಮದ್, ವೇಣುಗೋಪಾಲ್ ಇದ್ದರು.