ಡ್ರ್ಯಾಗರ್‌ನಿಂದ ವ್ಯಕ್ತಿಗೆ ಚುಚ್ಚಿದ ಯುವಕರು ವಶಕ್ಕೆ

vinobnagar police station
ವಿನೋಬನಗರ ಠಾಣೆ.
Published on

ಶಿವಮೊಗ್ಗ: ವಿನೋಬನಗರ ಎಪಿಎಂಸಿ ತರಕಾರಿ ಮಂಡಿ ಬಳಿ ಡ್ರ್ಯಾಗರ್‌ನಿಂದ ವ್ಯಕ್ತಿಯ ಹೊಟ್ಟೆ, ಕೈಗೆ ಚುಚ್ಚಿ ಗಾಯಗೊಳಿಸಿ ಗಲಾಟೆ ಮಾಡುತ್ತಿದ್ದ ಯುವಕರನ್ನು ಗಸ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಶಿಪುರದ ಲೋಕೇಶ್ ಎಂಬಾತ ಗಾಯಗೊಂಡಿದ್ದು ಆತನ ಸುತ್ತುವರಿದಿದ್ದ ಯುವಕರ ಗುಂಪು ಹೊಟ್ಟೆ ಮತು ಬಲಗೈಗೆ ಡ್ರ್ಯಾಗರ್‌ನಿಂದ ಚುಚ್ಚಿ ಗಾಯಗೊಳಿಸಿತ್ತು. ಮಧ್ಯರಾತ್ರಿ 1.30ರ ಹೊತ್ತಿಗೆ ಗಸ್ತು ತಿರುಗುತ್ತಿದ್ದ ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. 11 ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವಕರ ಬಳಿ ಇದ್ದ 13 ಇಂಚಿನ ಡ್ರ್ಯಾಗರ್, ಒಂದು ಪಲ್ಸರ್ ಎನ್‌ಎಸ್ 200 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net