ಮರದಲ್ಲಿ ಕಾದಿತ್ತು ಮೃತ್ಯು.. ಕೊಂಬೆ ಕಡಿಯುತ್ತಿದ್ದಾಗ ವಿದ್ಯುತ್ ತಗುಲಿ ಸಾವು

Youth
Published on


ಕಡಬ: ತಾಲೂಕಿನ ಕುಂತೂರಿನಲ್ಲಿ ಬುಧವಾರ ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಗುಲಿ ಕುಂತೂರು ಗ್ರಾಮದ ಕಾಲಾಯಿಲ್ ನಿವಾಸಿ ಮನೋಜ್(43) ಎಂಬುವರು ಮೃತಪಟ್ಟಿದ್ದಾರೆ.

ಮನೋಜ್ ಅವರು ಮರದ ಕೊಂಬೆ ಕಡಿಯುವಾಗ ಪಕ್ಕದಲ್ಲಿ ಹಾದು ಹೋಗಿರುವ 33 ಕೆ.ವಿ ವಿದ್ಯುತ್ ತಂತಿಗೆ ಕೊಂಬೆ ತಾಗಿ ಘಟನೆ ಸಂಭವಿಸಿದೆ. ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ತಂದು ಮಹಜರು ನಡೆಸಲಾಯಿತು. ಕಡಬ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net