ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

corona- suicide
Published on

ಉಡುಪಿ: ಬೆಂಗಳೂರಿನಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸಿಕೊಂಡಿದ್ದ ಯುವಕ ಸಾಲಗಾರರ ಒತ್ತಡದಿಂದ ಬೇಸತ್ತು ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯಡ್ಕ, ಬೊಮ್ಮರಬೆಟ್ಟು ಗ್ರಾಮದ ಆಶಿಶ್(30) ಬೆಂಗಳೂರಿನಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದರು. ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದು, ಸಾಲ ನೀಡಿದವರು ಆಗಾಗ ಕರೆ ಮಾಡಿ ಸಾಲ ತೀರಿಸುವಂತೆ ಹೇಳುತ್ತಿದ್ದರು.

ಸಾಲಗಾರರ ಕಾಟದಿಂದ ಬೇಸತ್ತು 6 ತಿಂಗಳ ಹಿಂದೆ ಅವರು ಊರಿಗೆ ಬಂದಿದ್ದರು. ಈ ವಿಚಾರದಲ್ಲಿ ಮಾನಸಿಕವಾಗಿ ನೊಂದಿದ್ದ ಆಶಿಶ್ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net