ನದಿಗೆ ಹಾರಿ ಯುವಕ ಆತ್ಮಹತ್ಯೆ

download (1)-09
Published on


ಮಂಗಳೂರು: ಕಾಜಿಲ ನಿವಾಸಿ ದೇಜು ಪೂಜಾರಿ ಎಂಬುವರ ಪುತ್ರ ಪವನ್ ಪೂಜಾರಿ(23) ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಆತ ಸೋಮವಾರ ರಾತ್ರಿ ತನ್ನ ಅಜ್ಜ ಭೋಜ ಪೂಜಾರಿಯವರನ್ನು ಕಾಣಲು ಮಂಗಳೂರಿನ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದು, ಬಳಿಕ ನಾಪತ್ತೆಯಾಗಿದ್ದ. ನಂತರ ಆತನ ಮೊಬೈಲ್ ಸ್ವಿಚ್ಡ್‌ಆಫ್ ಆಗಿತ್ತು. ಪವನ್‌ನ ಸ್ನೇಹಿತನ ತಂದೆ ಗುರುವಾರ ಪವನ್ ತಾಯಿಗೆ ಕರೆ ಮಾಡಿ, ಪವನ್ ತನ್ನ ಬ್ಯಾಗನ್ನು ನಮ್ಮ ಮನೆಯ ಕಾಂಪೌಂಡಿನ ಮೇಲೆ ಇಟ್ಟು ಹೋಗಿದ್ದಾನೆ ಎಂದಿದ್ದಾರೆ.
ಪವನ್ ನಾಪತ್ತೆ ಬಗ್ಗೆ ಆತನ ಬಾವ ವಿನೋದ್ ಎಂಬುವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯವರು ಪವನ್‌ಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ, ಗುರುಪುರ ಫಲ್ಗುಣಿ ನದಿಯಲ್ಲಿ ಸೇತುವೆಗೆ ಹತ್ತಿರದಲ್ಲಿ ತೇಲುತ್ತಿದ್ದ ಶವವೊಂದು ಪತ್ತೆಯಾಗಿದೆ. ಬಳಿಕ ಬಜ್ಪೆ ಪೊಲೀಸರು ಸ್ಥಳೀಯರ ಸಹಾಯದಿಂದ ಶವ ಮೇಲೆತ್ತಿ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಪವನ್ ಆತ್ಮಹತ್ಯೆಗೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net