ತಣ್ಣೀರುಬಾವಿ ಯುವಕ ಸಮುದ್ರಪಾಲು

sink
Published on


ಮಂಗಳೂರು: ಸ್ನಾನಕ್ಕೆಂದು ಸಮುದ್ರಕ್ಕೆ ಇಳಿದ ಯುವಕ ಅಲೆಗಳ ಹೊಡೆತಕ್ಕೆ ನೀರು ಪಾಲಾದ ಘಟನೆ ನಗರದ ಹೊರವಲಯದ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನಡೆದಿದೆ.


ನೀರು ಪಾಲಾದ ಯುವಕನನ್ನು ಸ್ಥಳೀಯ ನಿವಾಸಿ ಮುಹಮ್ಮದ್ ಕೈಫ್(19)ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಮಧ್ಯಾಹ್ನ ಮನೆ ಸಮೀಪದ ತಣ್ಣೀರುಬಾವಿ ಕಡಲಿಗೆ ಸ್ನಾನಕ್ಕೆ ತೆರಳಿದ್ದನು. ಈ ವೇಳೆ ಸಮುದ್ರದಲ್ಲಿ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net