ಯುವಕರು ಶಿಸ್ತಿನ ಜೀವನ, ಕಾನೂನು ಪಾಲಿಸಿ

ಹಟ್ಟಿ ಚಿನ್ನದಗಣಿ ಕಂಪನಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಚಿನ್ನದಗಣಿ ಕಂಪನಿಯ ಕಾನೂನು ಸಲಹೆಗಾರ ಚಂದ್ರಶೇಖರ್ ಮರಗೂರು, ಗಣಿ ಅಧಿಕಾರಿಗಳಾದ ರಮೇಶ್, ಕಾವ್ಯಾ, ಸಿಬ್ಬಂದಿ ರಂಗನಾಥ, ವೀರಭದ್ರಪ್ಪ, ರೇಷ್ಮಾ, ಅಮರಗುಂಡಪ್ಪ, ಶ್ರೀಮಂತ, ಮಹೇಬೂಬ್ ಇತರರಿದ್ದರು.

Published on

ಹಟ್ಟಿಚಿನ್ನದಗಣಿ: ಕಿತ್ತೂರು ರಾಣಿ ಚನ್ನಮ್ಮನ ತ್ಯಾಗ, ಧೈರ್ಯ ಮತ್ತು ದೇಶಭಕ್ತಿ ಯುವ ಪೀಳಿಗೆಗೆ ಸ್ಪೂರ್ತಿ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಚಿನ್ನದ ಗಣಿ ಕಂಪನಿಯ ಕಾನೂನು ಸಲಹೆಗಾರ ಚಂದ್ರಶೇಖರ್ ಮರಗೂರು ಹೇಳಿದರು.

ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ರಾಣಿ ಚನ್ನಮ್ಮ ಎಂದು ಭಾರತೀಯ ಇತಿಹಾಸದಲ್ಲಿ ಅಜರಾಮರವಾಗಿದೆ. ಮಹಿಳೆಯರು ಸಮಾಜ ನಿರ್ಮಾಣದಲ್ಲಿ ಮುಂಚೂಣಿಯಲ್ಲಿ ಇರಬೇಕು. ಯುವಕರು ದೇಶಪ್ರೇಮ, ಶಿಸ್ತಿನ ಜೀವನ ಮತ್ತು ಕಾನೂನು ಪಾಲನೆ ಮಾಡಬೇಕು ಎಂದರು.

ಗಣಿ ಅಧಿಕಾರಿಗಳಾದ ರಮೇಶ್, ಕಾವ್ಯಾ, ಸಿಬ್ಬಂದಿ ರಂಗನಾಥ, ವೀರಭದ್ರಪ್ಪ, ರೇಷ್ಮಾ, ಅಮರಗುಂಡಪ್ಪ, ಶ್ರೀಮಂತ, ಮಹೇಬೂಬ್ , ನಾರಾಯಣ, ಮೊಡಿ ಪೆಂಚಲದಾಸ ಪ್ರಸಾದ್, ರಾಮಣ್ಣ, ವೀರೇಶ, ಅರುಣಾ, ಬಸ್ಸಮ್ಮ, ದ್ರಾಕ್ಷಾಯಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net