ಯುವಕರು ಮೊಬೈಲ್​ ಗೀಳು ಬಿಡಲಿ

19 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮೊಬೈಲ್​ ಫೋನ್​ ಗೀಳು ಕ್ರಿಯಾತ್ಮಕ ಹಾಗೂ ಚಿಂತನ ಶಕ್ತಿ ಕಡಿಮೆ ಮಾಡುತ್ತದೆ. ಹೀಗಾಗಿ ಯುವಕರು ಈ ಗೀಳಿನಿಂದ ದೂರ ಇರಬೇಕು ಎಂದು ಯುವ ಚಿಂತನಾ ಸಮಾವೇಶದ ಅಧ್ಯಕ್ಷ ಪಿ.ವಿ. ಹಿರೇಮಠ ಹೇಳಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯುವ ಚಿಂತನಾ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಕೃತಿ, ಅರಣ್ಯ ನಾಶಗೊಳಿಸಿದರೆ ಆಮ್ಲಜನಕ ಕೊರತೆ ಉಂಟಾಗುತ್ತದೆ. ಪರಿಸರ ರಕ್ಷಣೆಯಲ್ಲಿ ಎಲ್ಲರೂ ತೊಡಗಬೇಕು. ಅರಣ್ಯ ನಾಶ ಮಾಡಿದರೆ ಉಷ್ಣಾಂಶ ಹೆಚ್ಚುತ್ತದೆ. ಪರಿಸರ ರಕ್ಷಣೆ ಮಾಡದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ವಿಕಾಸ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಜಗದೀಶ ಶೇಖರ ನಾಯಕ ಮಾತನಾಡಿ, ಸಂಸ್ಥೆ ವತಿಯಿಂದ ಮಹಿಳಾ ಸಬಲೀಕರಣ, ಯುವ ವಿಕಾಸ, ಗುರುವಿಕಾಸ ತರಬೇತಿ ನೀಡಲಾಗಿದೆ ಎಂದರು.

ವಕೀಲ ಪಿ.ಎಚ್​. ನೀರಲಕೇರಿ, ಅಖಿಲ ಭಾರತ ಪ್ರಾಥಮಿಕ ಶಾಲಾ ಫೆಡರೇಶನ್​ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿದರು. 200ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಲಾಯಿತು.

ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಶಂಕರ ಹಲಗತ್ತಿ, ವಿಲ್ಸನ್​ ಮೈಲಿ, ಲತಾ ಮುಳ್ಳೂರ, ಶಂಕರ ಕುಂಬಿ, ಕಲ್ಮೇಶ ಹಾವೇರಿಪೇಟ, ಪ್ರಭು ಹಂಚಿನಾಳ, ಸುನೀಲ ಬಾಗೇವಾಡಿ, ಮಹೇಶ ಹೊರಕೇರಿ, ಪ್ರಾಚಾರ್ಯ ಮೋಹನ ಸಿದ್ಧಾಂತಿ, ನಾಗೇಶ ಅಣ್ಣಿಗೇರಿ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್​ ಫರಾಸ, ಇತರರು ಇದ್ದರು.

ಮಾರ್ತಾಂಡಪ ಕತ್ತಿ ಸ್ವಾಗತಿಸಿದರು.

* ಸಮಾವೇಶ ನಿರ್ಣಯಗಳು*

* ಪರಿಸರ ಸಂರಕ್ಷಣೆಗೆ ಯುವ ಸಮುದಾಯವನ್ನು ತೊಡಗಿಸಲು ಕಾರ್ಯಾಗಾರ ಆಯೋಜನೆ

* ಮಳೆ ನೀರನ್ನು ಭೂಮಿಯಲ್ಲಿ ಮರುಪೂರಣ ಮಾಡುವುದು, ಜೀವವೈವಿಧ್ಯ ಸಂರಕ್ಷಣೆ

*ಅರಣ್ಯ ಸಂರಕ್ಷಣೆ, ಉತ್ತಮ ಗಾಳಿ, ನೀರು ಹಾಗೂ ಮಣ್ಣಿನ ರಕ್ಷಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net