ಯುವ ಜನಾಂಗ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು: ಕ್ಯಾ.ಸುಬ್ಬಯ್ಯ

23adarshkdga2
Published on

ಮಡಿಕೇರಿ: ಇಂದಿನ ಯುವ ಜನಾಂಗ ತಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಮಾಜಿ ಅಂತಾರಾಷ್ಟ್ರೀಯ ಶೂಟಿಂಗ್ ಪಟು ಕ್ಯಾ.ಸುಬ್ಬಯ್ಯ ಹೇಳಿದರು.


ಕೊಡಗು ಐರಿ ಸಮುದಾಯಗಳ ಮಧ್ಯೆ ನಡೆಯುವ ಒಂಭತ್ತನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆಎಂ ಕಾಲೇಜು ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು.


ಯುವ ಜನತೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಮುಂದೊಂದು ದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವಂತಾಗಬೇಕು ಎಂದು ಹೇಳಿದರು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಜನಾಂಗದ ಅಭಿವೃದ್ಧಿಗೆ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಪ್ರಶಂಸಿಸಿದರು.


ಉದ್ಘಾಟನಾ ಸಮಾರಂಭದಲ್ಲಿ ಎಸಿಎಫ್ ಐರೀರ ಗೋಪಾಲ, ಆರ್.ಎಫ್.ಒ ಮಾಲೆರ ಚರಣ್, ಐರಿ ಸಮಾಜ ನಿರ್ದೇಶಕಿ ಮುಲ್ಲೈರಿರ ಹೇಮಾವತಿ, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಕಾರ್ಯದರ್ಶಿ ಕಾಮೆಯಂಡ ಗಣೇಶ್, ಐರಿ ಸಮುದಾಯದ ಕ್ರಿಕೆಟ್ ಕ್ರೀಡಾಕೂಟದ ಜನಕರಾದ ಅಮ್ಮಣಂಡ ಜಾಬು ಪೂಣಚ್ಚ ಮತ್ತು ಐರೀರ ಪೂಣಚ್ಚ. ಉಪಸ್ಥಿತರಿದ್ದರು.


ಐನ್‌ಮನೆ ಅನಾವರಣ: ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಆಗುವ ತಂಡಕ್ಕೆ ನೀಡಲಾಗುವ ಮರದ ಐನ್ ಮನೆ ಮಾದರಿಯನ್ನು ಪಂದ್ಯಾವಳಿ ಉದ್ಘಾಟನೆ ಸಂದರ್ಭ ಅನಾವರಣಗೊಳಿಸಲಾಯಿತು. ಕರಕುಶಲಕರ್ಮಿ ಯನಂಗಡ ವಾಸು ಉದಯ್ ರಚನೆ ಮಾಡಿರುವ ಐನ್ ಮನೆ ಇಡೀ ಸಮಾರಂಭದ ಆಕರ್ಷಣೆಯಾಗಿತ್ತು. ಐನ್ ಮನೆ ಟ್ರೋಫಿ-೨೦೨೩ ಕ್ರೀಡಾಕೂಟವನ್ನು ಐರ‌್ಮಿಕ್ಕಡ ಕೂಟ ಮತ್ತು ಐರಿ ಸಮಾಜ ಅರಮೇರಿ(ರಿ) ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net