

ಬನಹಟ್ಟಿ :ಎಸ್ಆರ್ಎ ಮೈದಾನದಲ್ಲಿ ಜರುಗಿದ ತಾಲೂಕಿನ ಪ.ಪೂ ಕಾಲೇಜುಗಳ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅತ್ಯವಶ್ಯವಾಗಿದ್ದು, ಕ್ರೀಡಾಧಿಕಾರಿಗಳು ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಶ್ರಮಿಸಬೇಕು. ಕ್ರೀಡೆ ಮತ್ತು ಶಿಣ ಒಂದೇ ನಾಣ್ಯದ ಎರಡು ಮುಖಗಳು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ನೋಡಿದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಬರುತ್ತದೆ ಎಂದರು.
ಪ.ಪೂ. ಉಪನಿರ್ದೇಕ ಪುಂಡಲೀಕ ಕಾಂಬಳೆ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಗಳು ಅವಶ್ಯಕ. ಪಾಠದೊಂದಿಗೆ ಆಟೋಟಗಳಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯ ಗೋವಿಂದ ಡಾಗಾ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಕ್ರೀಡಾ ಸಂಯೋಜಕರಾದ ಎಂ.ಕೆ. ಮುರಗೋಡ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಭಾರಿ ಪ್ರಾಚಾರ್ಯ ಚಂದ್ರಪ್ರಭಾ ಬಾಗಲಕೋಟ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಿ.ಆರ್. ಗೊಡ್ಡಾಳೆ, ಎಸ್.ಎ. ಜಂಬಗಿ, ಬಿ.ಎಸ್. ಕಾಂಬಳೆ, ವಿ.ಎಲ್. ನಾರಾಯಣಕರ ಉಪಸ್ಥಿತರಿದ್ದರು.
ಬನಹಟ್ಟಿ ಎಸ್ಆರ್ಎ ಮೈದಾನದಲ್ಲಿ ಪ.ಪೂ. ಕಾಲೇಜುಗಳ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಾಸಕ ಸಿದ್ದು ಸವದಿ, ಪುಂಡಲಿಕ ಕಾಂಬಳೆ, ಗೋವಿಂದ ಡಾಗಾ ಇದ್ದರು.