ಯುವಕರ ಸೇವೆ ಮಾದರಿ

lxr yuth
Published on

ಲಕ್ಷ್ಮೇಶ್ವರ: ಬುಧವಾರದಿಂದ ಮೂರು ದಿನ ನಡೆಯುವ ಜಾತ್ರಾ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಪ್ರತಿವರ್ಷದಂತೆ ಈ ವರ್ಷವೂ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಿಂದ ಗ್ರಾಪಂ ಸದಸ್ಯ ಪ್ರವೀಣ ಕಡೂರ ನೇತೃತ್ವದಲ್ಲಿ ಸುಮಾರು 15ಯುವಕರು ಪಾದಯಾತ್ರೆ ಮೂಲಕ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಆಗಮಿಸಿದರು.

ಬುಧವಾರ ದೇವಸ್ಥಾನದ ಅಲ್ಲಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು. ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಯುವ ಪಡೆ ಸೇವೆ ಸಲ್ಲಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಅರುಣ ಕಡೂರ, ಪ್ರಶಾಂತ ಕಡೂರ, ಶಂಭು, ಭರತ್, ಶರತ್, ವಿಶ್ವ, ಬಸವರಾಜ, ಟಿ.ಉಮೇಶ, ಸೋಮನಗೌಡ್ರ, ಶಿವು, ಸೋಮು, ಬಸವಲಿಂಗಪ್ಪ, ಕಿರಣ, ಬಸವರಾಜ ಎಂ., ನಾಗರಾಜ, ರಾಘವೇಂದ್ರ ಇತರರು ತಂಡದಲ್ಲಿದ್ದಾರೆ. ಎರಡು ದಿನ ಸೋಮೇಶ್ವರ ದೇವಸ್ಥಾನದಲ್ಲಿ ವಿವಿಧ ಕಾರ್ಯಗಳಲ್ಲಿ ನಿರತರಾಗುವುದು ವಿಶೇಷ.

ಈ ಕುರಿತು ಪ್ರತಿಕ್ರಿಯಿಸಿದ ದೇವಸ್ಥಾನದ ಅರ್ಚಕ ರಾಘವೇಂದ್ರ ಪೂಜಾರ, ಯುವ ತಂಡದ ಸೇವೆ ನಿಜಕ್ಕೂ ಶ್ಲಾಘನೀಯ. ಇದರಿಂದ ಮತ್ತಷ್ಟು ಯುವಕರು ಪ್ರೇರಣೆಗೊಂಡು ಇಂತಹ ಧಾರ್ಮಿಕ ಸೇವೆಯಲ್ಲಿ ತೊಡಗಿಕೊಳ್ಳಲು ಮುಂದಾಗಬೇಕು ಎಂದರು.

*ಕೋಟ್

ಪ್ರತಿವರ್ಷ ಜಾತ್ರೆ ವೇಳೆ ಮನೆ ದೇವರು ಸೋಮೇಶ್ವರನ ಸನ್ನಿಧಿಗೆ ಬರಿಗಾಲಿನಿಂದ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ದೇವರ ಸೇವೆ ಮಾಡುವುದು ನಮಗೆ ದೊರಕಿದ ಪುಣ್ಯವಾಗಿದೆ.

ಪ್ರವೀಣ ಕಡೂರ ಹಲಗೇರಿ ಗ್ರಾಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net