ನದಿಗೆ ಹಾರಿದ ಯುವಕನ ರಕ್ಷಣೆ

driver
Published on

ಬಂಟ್ವಾಳ: ಪಾಣೆಮಂಗಳೂರಿನ ಗೂಡಿನಬಳಿ ಹಳೇ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹಾಸನ ಜಿಲ್ಲೆಯ ಕುಮಾರ್ ಎಂಬಾತನನ್ನು ಗೂಡಿನಬಳಿಯ ಮಹಮ್ಮದ್ ಮತ್ತವರ ತಂಡ ರಕ್ಷಿಸಿದೆ.

ಮಂಗಳೂರು- ಬೆಂಗಳೂರು ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕುಮಾರ್ ಸೋಮವಾರ ಬೆಳಗ್ಗೆ 8.15 ರ ಸುಮಾರಿಗೆ ತನ್ನ ಖಾಕಿ ಸಮವಸ್ತ್ರ ಧರಿಸಿಕೊಂಡು ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ಇದನ್ನು ಕಂಡ ಸ್ಥಳೀಯರು ಈಜುಗಾರ ಮಹಮ್ಮದ್ ಅವರಿಗೆ ತಿಳಿಸಿದ್ದಾರೆ. ದೋಣಿ ಮೂಲಕ ತೆರಳಿದ ಮಹಮ್ಮದ್ ಯುವಕನ್ನು ನೀರಿನಿಂದ ಮೇಲೆತ್ತಿದ್ದು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಶಿಹಾಬ್ ಮತ್ತು ಸ್ವಾಲಿಹ್ ಎಂಬುವರು ಸಹಕಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net