

ಸಾಗರ: ಇತ್ತೀಚೆಗೆ ಯುವಜನರು ಸಂಸ್ಕೃತಿ, ಸಂಸ್ಕಾರದಿಂದ ದೂರ ಸರಿಯುತ್ತಿದ್ದಾರೆ. ಅವರಿಗೆ ಧರ್ಮ ಮತ್ತು ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವುದು ರಥಯಾತ್ರೆಯ ಉದ್ದೇಶ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಹಮ್ಮಿಕೊಂಡಿದ್ದ ಶೌರ್ಯ ಜಾಗೃತ ರಥಯಾತ್ರೆಯ ಧರ್ಮ ಸಭೆಯಲ್ಲಿ ಮಾತನಾಡಿದರು.
ಹಿಂದುತ್ವದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಶಾಖೆಗಳ ವಿಸ್ತರಣೆಯಾಗುತ್ತಿದೆ. ಹಿಂದು ಧರ್ಮದ ಪರ ಹೋರಾಟ, ಗೋಹತ್ಯೆ ತಡೆ, ಲವ್ ಜಿಹಾದ್ ವಿರುದ್ಧ ಧ್ವನಿ ಎತ್ತುವ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರ ಮೇಲೆ ಸರ್ಕಾರ ಗೂಂಡಾ ಕಾಯ್ದೆ ವಿಧಿಸಿ, ಗಡಿಪಾರು ಮಾಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದರು.
ತಾಳಗುಪ್ಪ ಕೂಡ್ಲಿ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನಮಗೆ ಹಿಂದು ಶಬ್ದದ ಜತೆ ಹಿಂದುತ್ವ ಎನ್ನುವ ಶ್ರೇಷ್ಠ ವಾಕ್ಯ ಉಳಿಸಿಕೊಳ್ಳುವ ಅಗತ್ಯವಿದೆ. ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಬೇಕು. ಈ ಜಾಗೃತಿ ಯಾತ್ರೆ ಸಮಸ್ತ ಹಿಂದು ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಮಹಾಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ವಿಹಿಂಪ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಜರಂಗದಳದ ದಕ್ಷಿಣ ಪ್ರಾಂತ್ಯ ಸಂಯೋಜಕ ಕೆ.ಆರ್.ಸುನೀಲ್, ವಿಭಾಗ ಸಂಯೋಜಕ ರಾಜೇಶ್ ಗೌಡ, ಸಂತೋಷ್, ಶಿವಾಜಿ, ಶ್ವೇತಾ ಇತರರಿದ್ದರು.
ಗುಲಾಮಗಿರಿ ಹೋಗಲಾಡಿಸಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತರುತ್ತಿದೆ. ಆದರೆ ರಾಜ್ಯದಲ್ಲಿ ಅದಕ್ಕೂ ಅಪಸ್ವರ ಎದ್ದಿದೆ. ರಾಜ್ಯವನ್ನು ಆಳುವವರಿಗೆ ನಮ್ಮ ಮಕ್ಕಳು ಟಿಪ್ಪು, ಅಕ್ಬರ್ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಬಯಕೆ ಇದೆಯೇ ಹೊರತು, ವೀರತ್ವ ಮೆರೆದ ಕೆಳದಿ ಶಿವಪ್ಪನಾಯಕ, ರಾಣಿ ಚನ್ನಮ್ಮ ಅಂಥವರ ಬಗ್ಗೆ ತಿಳಿಸಿಕೊಡುವ ಆಸಕ್ತಿ ಇಲ್ಲ.ಶ್ರೀ ರಾಜಶೇಖರಾನಂದ ಸ್ವಾಮೀಜಿಗುರುಪುರ ವಜ್ರದೇಹಿ ಮಠ