ವಡೇರಹಳ್ಳಿ ಕೆರೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು

Water death
Published on

ಮಂಡ್ಯ: ಈಜು ಬಾರದ ಇಬ್ಬರು ಯುವಕರು ವಡೇರಹಳ್ಳಿ ಗ್ರಾಮದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.  ಬೆಂಗಳೂರಿನ ಭರತ (18) ಹಾಗೂ ಅವಿನಾಶ್​ (20) ಮೃತಪಟ್ಟವರು.

ಇಬ್ಬರು ಯುವಕರು ಬೆಂಗಳೂರಿನವರು. ನಾಗಮಂಗಲ ತಾಲೂಕಿನ ವಡೇರಹಳ್ಳಿಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಭಾನುವಾರ ಮಧ್ಯಾಹ್ನ ಕೆರೆಗೆ ಈಜಾಡಲು ತೆರಳಿದ್ದರು. ಇಬ್ಬರಿಗೂ ಈಜು ಬರುತ್ತಿರಲಿಲ್ಲ. ಇಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ನೆರೆಯವರು ಗಮನಿಸಿ ನೆರವಿಗೆ ಮುಂದಾದರು. ಅಷ್ಟರಲ್ಲಿ ಯುವಕರು ನೀರಿನಲ್ಲಿ ಮುಳುಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಯುವಕರ ಶವ ಹುಡುಕುತ್ತಿದ್ದಾರೆ. ಬೆಳ್ಳೂರು ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net