ಗ್ರಾಮಾಭಿವೃದ್ಧಿಗೆ ಯುವ ಸಂಘಟನೆ ದಾರಿದೀಪ

pdb-1
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಗ್ರಾಮಾಭಿವೃದ್ಧಿಗೆ ಯುವ ಸಂಘಟನೆಗಳು ದಾರಿದೀಪವಿದ್ದಂತೆ. ಗ್ರಾಮೀಣ ಭಾಗದಲ್ಲಿ ಯುವ ಜನತೆಯನ್ನು ದಾರಿ ತಪ್ಪದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆ ಇತರರಿಗೆ ಮಾದರಿಯಾಗಿದೆ ಎಂದು ಬೆಂಗಳೂರು ಯುವ ಉದ್ಯಮಿ ಚೆನ್ನಕೇಶವ ಡಿ.ಮೆಂಡನ್ ಹೇಳಿದರು.

ಹೆಜಮಾಡಿಯ ಮಟ್ಟು ಮೊಗವೀರ ಮಹಾಸಭಾದ ಆಡಳಿತಕ್ಕೊಳಪಟ್ಟ ಮಟ್ಟುಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ ವಾರ್ಷಿಕ ಮಂಗಲೋತ್ಸವ, ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಾದ ಶರಣ್ ಕುಮಾರ್ ಮಟ್ಟು, ಲಿಖಿತ್ ಕೇಶವ ಸುವರ್ಣ, ನೀಲಯ ಗುರಿಕಾರ, ವಿದಿತ್ ಅಶೋಕ್ ಕುಮಾರ್, ಅಂಜಲಿ ಎಂ.ಸುವರ್ಣ, ಕೇಶವ ಎಲ್.ಮೆಂಡನ್, ರಿಯಾ ಎಸ್.ಕರ್ಕೇರ ಅವರನ್ನು ಸನ್ಮಾನಿಸಲಾಯಿತು.

ಮಟ್ಟು ವಿದ್ಯಾದಾಯಿನಿ ಯುವಕ ವೃಂದದ ಅಧ್ಯಕ್ಷ ಭರತೇಶ್ ಡಿ.ಹೆಜ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಯಜ್ಞೇಶ್ ಕರ್ಕೇರ ಬೆಂಗಳೂರು, ಲೋಕೇಶ್ ಅಮೀನ್, ಬಾಲಕೃಷ್ಣ ಎಲ್.ಸುವರ್ಣ, ಲೋಹಿತಾಕ್ಷ ಎ.ಕರ್ಕೇರ, ಭರತೇಶ್ ಎನ್.ಮೆಂಡನ್, ಕೇಶವ ಎನ್.ಶ್ರೀಯಾನ್ ಮಟ್ಟುಪಟ್ಣ, ನೀಲಯ್ಯ ಗುರಿಕಾರ, ಜಯರಾಮ ಗುರಿಕಾರ, ಮಹಾಸಭಾದ ಅಧ್ಯಕ್ಷ ರಘುವೀರ ಎಲ್.ಸುವರ್ಣ, ಮಟ್ಟು ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ನೂತನ್ ಮನೋಹರ್, ಮುಂಬೈ ಸಮಿತಿ ಅಧ್ಯಕ್ಷ ಡಾ.ಶ್ರೀಧರ್ ವಿ.ಶೇರಿಗಾರ್, ಯುವತಿ ವೃಂದದ ಅಧ್ಯಕ್ಷೆ ಶೋಭಿತಾ ಹರೀಶ್, ಶ್ರೀ ಪಾಂಡುರಂಗ ಭಜನಾ ಮಂದಿರದ ಪ್ರಧಾನ ಅರ್ಚಕ ವಿಜಯ ಕೆ.ಕೋಟ್ಯಾನ್, ಹರೀಶ್ ಡಿ.ಪುತ್ರನ್, ಎಂ.ಡಿ.ಕರ್ಕೇರ, ಡಿ.ಎನ್.ಸಾಲ್ಯಾನ್, ಸೋನಿ ಶಶಿಧರ್ ಉಪಸ್ಥಿತರಿದ್ದರು. ವಿಮಲಾ ದಯಾನಂದ್ ಸ್ವಾಗತಿಸಿದರು. ಶರಣ್‌ಕುಮಾರ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net