ಜಗತ್ತಿನ ಓಟದ ವೇಗಕ್ಕೆ ಯುವಕರು ಹೊಂದಿಕೊಳ್ಳಬೇಕು

25-02-Shiva-4
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಯುವ ಸಂವಾದ ಭಾರತ್-2047 ಕಾರ್ಯಕ್ರಮವನ್ನು ರಾಯಚೂರು ವಿವಿ ಕುಲಪತಿ ಡಾ.ಜಿ.ಎಸ್.ಬಿರಾದರ ಉದ್ಘಾಟಿಸಿದರು. ನಿವೃತ್ತ ಎಸ್ಪಿ ಎಸ್.ಬಿ.ಪಾಟೀಲ್, ಪ್ರಾಚಾರ್ಯ ಡಾ.ಯಂಕಣ್ಣ, ಪ್ರಾಧ್ಯಾಪಕರಾದ ಡಾ.ಪ್ರಾಣೇಶ ಕುಲಕರ್ಣಿ, ಮಹಾಂತೇಶ ಅಂಗಡಿ, ರವಿ ಮಸ್ಕಿ, ಮಹಾದೇವಪ್ಪ ಇದ್ದರು.
Published on

ರಾಯಚೂರು: ಜಗತ್ತು ಇಂದು ತುಂಬಾ ಸ್ಪರ್ಧಾತ್ಮಕ ಯುಗದತ್ತ ಸಾಗುತ್ತಿದೆ. ಜಗತ್ತಿನ ಓಟದ ವೇಗಕ್ಕೆ ತಕ್ಕಂತೆ ಯುವಕರು ಹೊಂದಿಕೊಳ್ಳಬೇಕು. ಹೀಗಿದ್ದಾಗ ಮಾತ್ರ ಯುವಕರು ಜೀವನದಲ್ಲಿ ಯಶಸ್ಸು ಸಾಸಲು ಸಾಧ್ಯವಾಗುತ್ತದೆ ಎಂದು ರಾಯಚೂರು ವಿವಿ ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ್ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವ ಸಂವಾದ-ಭಾರತ್ 2047 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉನ್ನತ ಮಟ್ಟಕ್ಕೆ ತಲುಪಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಾ ಯುವಜನರ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎಸ್.ಬಿ.ಪಾಟೀಲ್ ಮಾತನಾಡಿ, ಇಂದು ಶಿಕ್ಷಣ, ಸಂಶೋಧನೆ, ಉದ್ಯೋಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಯುವಜನರಿಗೆ ಒಳ್ಳೆಯ ಅವಕಾಶಗಳಿವೆ. ಜೀವನದಲ್ಲಿ ಉತ್ತಮ ಸಾಧನೆ ತೋರುವುದರ ಜತೆಗೆ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಉದ್ಯಮಿ ಪ್ರಕಾಶ ಆಲಂಪಲ್ಲಿ ಮಾತನಾಡಿ, ಯುವಕರು ಸರ್ಕಾರಿ ನೌಕರಿಯೇ ಎಂದು ಕಾಯುವ ಬದಲು ತಾವು ಉದ್ಯಮಿಗಳಾಗಿ ಇನ್ನಿತರರಿಗೆ ಕೆಲಸ ನೀಡುವಂತಾಗಬೇಕು. ಉದ್ಯಮಿಗಳ ಸ್ಥಾಪನೆಗೆ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತಿದ್ದು, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗಲಿದೆ ಎಂದರು.
ಕಾಲೇಜು ಪ್ರಾಚಾರ್ಯ ಡಾ.ಯಂಕಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಪ್ರಾಣೇಶ ಕುಲಕರ್ಣಿ, ಮಹಾಂತೇಶ ಅಂಗಡಿ, ರವಿ ಮಸ್ಕಿ, ಮಹಾದೇವಪ್ಪ ಹಾಗೂ ವಿದ್ಯರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net