ಮೇ.5 ರಂದು ಯುವ ಸಂಗೀತೋತ್ಸವ

sangeetha
Published on

ಮಂಗಳೂರು: ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣ ಮಠದ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಯುವ ಸಂಗೀತೋತ್ಸವ-2024 ಕಾರ್ಯಕ್ರಮ ಮೇ.5ರ ಭಾನುವಾರ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ.

ಬೆಳಗ್ಗೆ 10 ರಿಂದ ಸಂಜೆ 4.30ರ ವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯುವ ಪ್ರತಿಭೆಗಳಾದ ಚಿನ್ಮಯಿ ಭಟ್ ಮಂಗಳೂರು, ವೆಂಕಟಯಶಸ್ವಿ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು, ಮೇಧಾ ಉಡುಪ ಮಂಗಳೂರು ಹಾಗೂ ತನ್ಮಯೀ ಹಸನಡ್ಕ ಅವರು ಸಂಗೀತ ಕಛೇರಿ ನೀಡಲಿದ್ದಾರೆ. ಅವರಿಗೆ ಮಂಗಳೂರಿನ ಧನಶ್ರೀ ಶಬರಾಯ ಮತ್ತು ಗೌತಮ್ ಭಟ್ ಪಿಟೀಲು, ಅವಿನಶ್ ಬೆಳ್ಳಾರೆ ಮಂಗಳೂರು ಮತ್ತು ಪ್ರಣವ್ ಸುಬ್ರಹ್ಮಣ್ಯ ಮೈಸೂರು ಮೃದಂಗ ಪಕ್ಕವಾದ್ಯದಲ್ಲಿ ಸಹಕರಿಸಲಿದ್ದಾರೆ. ಸಂಜೆ 5 ಗಂಟೆಗೆ ಸರಿಯಾಗಿ ಅಂತರಾಷ್ಟ್ರೀಯ ಮಟ್ಟದ ಯುವ ಕಲಾವಿದೆ ಕೇರಳದ ಸೂರ್ಯ ಗಾಯತ್ರಿ ಅವರ ಪ್ರಧಾನ ಕಛೇರಿ ನಡೆಯಲಿದೆ. ಪಕ್ಕವಾದ್ಯದಲ್ಲಿ ಗಣರಾಜ್ ಕಾರ್ಲೆ ಪಿಟೀಲು, ಅನಿಲ್ ಕುಮಾರ್ ವಡಗರ ಮೃದಂಗ, ಮಾಂಜೂರು ಉಣ್ಣಿಕೃಷ್ಣನ್ ಘಟ ಸಹಕರಿಸಲಿದ್ದಾರೆ. ಕಲಾಭಿಮಾನಿಗಳೆಲ್ಲರಿಗೂ ಮುಕ್ತ ಪ್ರವೇಶ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net