ಮೋಟೆಬೆನ್ನೂರು ಬಳಿ ಯುವಕನ ಹತ್ಯೆ

25byd2
Published on

ಬ್ಯಾಡಗಿ: ಯುವಕನೊಬ್ಬನನ್ನು ಹತ್ಯೆಗೈದ ಘಟನೆ ತಾಲೂಕಿನ ಮೋಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಲಿಂಗೇಶ ತೇಜಪ್ಪ (35) ಹತ್ಯೆಗೀಡಾದ ವ್ಯಕ್ತಿ. ಚಿತ್ರದುರ್ಗದಲ್ಲಿ ಡಾನ್ಸ್ ಕ್ಲಾಸ್ ಹಾಗೂ ಗೆಳೆಯನೊಂದಿಗೆ ಕಲರ್ಸ್ ಕೆಫೆ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಆ. 24ರಂದು ಗೆಳೆಯನ ಹುಟ್ಟು ಹಬ್ಬವಿದೆ ಎಂದು ಮನೆಯಲ್ಲಿದ್ದ ಬಂಗಾರದ ಚೈನ್ ತೆಗೆದುಕೊಂಡು ಬೈಕ್‌ನಲ್ಲಿ ತೆರಳಿದ್ದ. ರಾತ್ರಿ ವಾಪಸಾಗುವಾಗ ಕೊಲೆಯಾಗಿದ್ದು, ಬೆಳಗ್ಗೆ ಪತ್ತೆಯಾಗಿದೆ. ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದು ಕೊಲೆಗೆ ಕಾರಣ ತಿಳಿದುಬಂದಿಲ್ಲ.

ರಾತ್ರಿ 8.45 ಸುಮಾರಿಗೆ ತಂದೆಗೆ ಕರೆ ಮಾಡಿ ಊಟಕ್ಕೆ ಬರುತ್ತೇನೆ ಎಂದು ತಿಳಿಸಿದ್ದ. ಆದರೆ, ಮರುದಿನ ತಂದೆಗೆ ಮಗನ ಕೊಲೆಯಾಗಿರುವ ಮಾಹಿತಿ ಲಭಿಸಿದೆ.

ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮೃತನ ತಂದೆ ಎಂ.ತೇಜಪ್ಪ ಒತ್ತಾಯಿಸಿದ್ದಾರೆ.

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net