ಝಳಕಿ (ಕೆ) ಗ್ರಾಮದಲ್ಲಿ ಜಗಳ ಬಿಡಿಸಲು ಹೋದವನನ್ನೇ ಕೊಂದರು : ಬೆ0ಗಳೂರಿಗೆ ಹೋಗಬೇಕಾಗಿದ್ದವ ಹೆಣವಾದ

Rajashekar Polic Patil
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಮಾತಿಗೆ ಮಾತು ಬೆಳೆದು ಶುರುವಾದ ಜಗಳ ವಿಕೋಪಕ್ಕೆ ತಿರುಗಿದಾಗ, ಜಗಳ ಬಿಡಿಸಲು ಬಂದ ಯುವಕನನ್ನೇ ಹೊಡೆದು ಸಾಯಿಸಿದÀ ಘಟನೆ ಆಳಂದ ತಾಲೂಕಿನ ಝಳಕಿ (ಕೆ) ಗ್ರಾಮದಲ್ಲಿ ಭಾನುವಾರ ನಡೆದಿದೆ.

ರಾಜಶೇಖರ ಗುರುಶರಣಪ್ಪ ಪೊಲೀಸ್ ಪಾಟೀಲ್(೩೧) ಕೊಲೆಯಾದವ. ಬೆಂಗಳೂರಿನ ಖಾಸಗಿ ಕಂಪನಿಯೊAದರಲ್ಲಿ ಕೆಲಸ ಮಾಡಿಕೊಂಡಿದ್ದ. ಗ್ರಾಮದ ಜಾತ್ರೆ ನಿಮಿತ್ತ ಏ.೧೮ರಂದು ಬಂದಿದ್ದ. ಸೋಮವಾರ ಬೆಂಗಳೂರಿಗೆ ಹೋಗುವವನಿದ್ದು, ರೈಲು ಟಿಕೆಟ್ ಸಹ ಬುಕ್ ಮಾಡಿಕೊಂಡಿದ್ದ. ಆದರೆ, ಎರಡು ಕುಟುಂಬಗಳ ಜಗಳ ಕೆಲಸಕ್ಕೆ ಹೋಗಬೇಕಾದ ಯುವಕನನ್ನೇ ಬಲಿ ಪಡೆದಿದೆ. ಮದುವೆಯಾಗಿ ಕೇವಲ ೧೦ ತಿಂಗಳಾಗಿದ್ದು, ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು.

ಘಟನೆ ಹಿನ್ನೆಲೆ

ಝಳಕಿ (ಕೆ) ಗ್ರಾಮದಲ್ಲಿ ಪೊಲೀಸ್ ಪಾಟೀಲ್ ಹಾಗೂ ಶಿರೋಳ ದೊಡ್ಡ ಕುಟುಂಬಳಿದ್ದು ಎರಡು ಕುಟುಂಬಗಳ ಮಧ್ಯೆ ಮೊದಲಿನಿಂದಲೂ ಜಗಳ ನಡೆಯುತ್ತಿತ್ತು.ಭಾನುವಾರ ಬೆಳಗ್ಗೆ ಎರಡು ಕುಟುಂಬದವರ ನಡುವೆ ಮತ್ತೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಈ ವೇಳೆ ಯುವಕ ರಾಜಶೇಖರ ಜಗಳ ಬಿಡಿಸಲು ಹೋಗಿದ್ದ ವೇಳೆಯಲ್ಲಿ ಆತನಿಗೆ ಕಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ.

ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರು, ಪಿಎಸ್‌ಐ ಸವಿತಾ ಕಲ್ಲೂರ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ೧೩ ಜನರ ವಿರುದ್ಧ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net