ಬಡಗಮಿಜಾರಲ್ಲಿ ಯುವಕನ ಕೊಲೆ

murder
Published on

ಮೂಡುಬಿದಿರೆ: ಬಡಗಮಿಜಾರು ಗ್ರಾಮದ ಅರೆಮಜಲುಪಲ್ಕೆ ಎಂಬಲ್ಲಿ ಯುವಕನ ಕೊಲೆಯಾಗಿದ್ದು, ಬುಧವಾರ ಬೆಳಕಿಗೆ ಬಂದಿದೆ. 
ಅರೆಮಜಲು ಪಲ್ಕೆ ನಿವಾಸಿ ಚಂದಯ್ಯ ಗೌಡ ಅವರ ಪುತ್ರ ಉಮೇಶ್ ಗೌಡ(೩೫) ಕೊಲೆಯಾದ ವ್ಯಕ್ತಿ.

ಉಮೇಶ್ ಗೌಡ ಅವರನ್ನು ಮಂಗಳವಾರ ತಡರಾತ್ರಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೈದಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net