

ಮಾನ್ವಿ: ಭೇದ ಭಾವನೆ ಹಾಗೂ ಮೊಬೈಲ್ ಕಾರಣಕ್ಕೆ ಜನರು ಕರ್ತವ್ಯ ಮರೆತಿದ್ದು, ಆದರ್ಶ ಸಮಾಜ ನಿರ್ಮಾಣ ಇಂದಿನ ಅಗತ್ಯವಾಗಿದೆ ಎಂದು ಶಿಕ್ಷಕ ಲಾಲ್ ಹುಸೇನ್ ಕಂದಗಲ್ ಹೇಳಿದರು.
ಪಟ್ಟಣದ ಕಲ್ಮಠ ಧ್ಯಾನ ಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದಿಂದ ಇತ್ತೀಚಿಗೆ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ದುಶ್ಚಟಗಳನ್ನು ದೂರ ಮಾಡಬೇಕು ಎಂದರು.
ಮೌಲಾನಾ ಅಬುಲಾಲ್ ಉಮ್ರಿ ಕುರಾನ್ ಪಠಿಸಿದರು. ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಫ್ತಿ ಸೈಯದ್ ಹಸನ್ ಜಿಶಾನ್ ಖಾದ್ರಿ ಖಾಸ್ಮಿ, ವಲಯ ಸಂಚಾಲಕ ಮೌಲಾನ ಅನ್ವರ್ ಪಾಷಾ ಉಮ್ರಿ, ಶಂಕ್ರಯ್ಯಸ್ವಾಮಿ ಸುವರ್ಣಗಿರಿಮಠ, ದಾವೂದ್ ಸಿದ್ದಿಖಿ, ಸಮೀರ್‌ಪಾಷಾ, ಎಸ್‌ಐಒ ರಾಜ್ಯ ಕಾರ್ಯದರ್ಶಿ ನಾಸಿರ್‌ಅಲಿ ಇನ್ನಿತರರು ಇದ್ದರು.