ಮಹಂತ ಜೋಳಿಗೆ ಮೂಲಕ ಅರಿವು

1-msk-2
Published on

ಮಸ್ಕಿ: ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಉಪ ತಹಸೀಲ್ದಾರ್ ವಿಜಯಕುಮಾರ ಸಜ್ಜನ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಇಳಕಲ್ಲಿನ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಂಗಳವಾರ ಮಾತನಾಡಿದರು. ಯುವ ಜನಾಂಗ ಮತ್ತು ದುಡಿಯುವ ವರ್ಗದ ಜನ ದುಶ್ಚಟಗಳಿಗೆ ದಾಸರಾಗಿ ಜೀವನ ನಡೆಸುವುದನ್ನು ನೋಡಿ ಮಹಾಂತ ಶಿವಯೋಗಿಗಳು 1975 ರಿಂದ ಲಿಂಗೈಕ್ಯರಾಗುವವರೆಗೂ ಮಹಂತ ಜೋಳಿಗೆಯ ಮೂಲಕ ಜನರಲ್ಲಿ ಅರಿವು ಮೂಡಿಸಿ ದುಶ್ಚಟಗಳನ್ನು ಬಿಡಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಸಿಬ್ಬಂದಿ ಅರುಣ್ ಕುಮಾರ, ಗುರುನಾಥ, ಪುಷ್ಪಲತಾ, ಗಂಗಪ್ಪ, ರವಿಕುಮಾರ, ಉಮಾದೇವಿ, ಅಂಬಿಕಾ, ಶಿವುಕುಮಾರ, ಚನ್ನನಗೌಡ ಇದ್ದರು. ಪುರಸಭೆ, ವಿವಿಧ ಸರ್ಕಾರಿ ಕಚೇರಿ ಮತ್ತು ಶಾಲೆ, ಕಾಲೇಜುಗಳಲ್ಲಿ ವ್ಯಸನಮುಕ್ತ ದಿನವನ್ನು ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net