ರಾಜ್ಯದ ಯುವಕರು ಕೆಲಸ ಗಿಟ್ಟಿಸಿಕೊಳ್ಳಲು ಇದೇ ಸದವಕಾಶವೆಂದ ಸಚಿವ ಬಿಸಿ ಪಾಟೀಲ್

Youth Employment
Published on

ಹಾವೇರಿ: ರಾಜ್ಯದ ಯುವಕರು ಕೆಲಸ ಗಿಟ್ಟಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಅವಕಾಶ ಇಲ್ಲವೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್​ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಹೊರರಾಜ್ಯದ ಕೆಲಸಗಾರರು ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ವಲಸೆ ಹೋಗಿರುವುದರಿಂದ ಕರ್ನಾಟಕದ ಯುವಕರಿಗೆ ಕೆಲಸವನ್ನು ಗಿಟ್ಟಿಸಿಕೊಳ್ಳಲು ಇಂದೊಂದು ಸದಾವಕಾಶ. ಇದನ್ನು ಬಳಸಿಕೊಳ್ಳಿ ಎಂದು ಇಂದು ಬೆಳಗ್ಗೆ ಬಿ.ಸಿ. ಪಾಟೀಲ್​ ಅವರು ಟ್ವೀಟ್​ ಮಾಡಿದ್ದಾರೆ.

ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ಸೆಳೆದಿರುವ ಪಾಟೀಲ್​, ಬೃಹತ್ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯೋಗದ ಸುವರ್ಣಾವಕಾಶವಿದೆ ಎಂಬರ್ಥದಲ್ಲಿ ಹೇಳಿದ್ದಾರೆ.

ಮಹಾಮಾರಿ ಕರೊನಾ ವೈರಸ್​ ಹರಡಿದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಿರುವುದರಿಂದ ಕೆಲಸವಿಲ್ಲದೇ ಬಹುತೇಕರು ತಮ್ಮ ತಮ್ಮ ರಾಜ್ಯಗಳಿಗೆ ಹಾಗೂ ಊರುಗಳಿಗೆ ಮರಳಿದ್ದಾರೆ. ಹೋದವರಲ್ಲಿ ಬಹುತೇಕರ ಮರಳಿ ಮರುವುದಿಲ್ಲ ಎಂಬುದು ಹಲವರ ಅಭಿಪ್ರಾಯವೂ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net